Sunday, September 24, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಮತಿಘಟ್ಟ ಕ್ರಾಸ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಗಿರಿಧರ್ (46) ಮಯಂಕ್(3) ಮೃತ ರ್ದುದೈವಿಗಳು. ಇನ್ನು ಹೊನ್ನಾವರದಿಂದ ಸಂಬಂಧಿಕರ ಮದುವೆ ನಿಮಿತ್ತ ಗಿರಿಧರ್ ಕುಟುಂಬ ತೆರಳುವಾಗ, ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿ.ಟಿ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿ.ಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುಮಗಳಿಂದ ಮತದಾನ; ಮತದಾನದ ವಿಶೇಷ ಜಾಗೃತಿ

ಚಿಕ್ಕಮಗಳೂರು: ಮದುಮಗಳೊಬ್ಬರು ಹಸೆಮಣೆ ಏರುವ ಮುನ್ನ ಮತದಾನ ಮಾಡುವ ಮೂಲಕ ಹಕ್ಕು ತಮ್ಮ ಚಲಾಯಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಇಂದು (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ರಾಜ್ಯಾದ್ಯಂತ ಮತದಾನ ಬಿರುಸಿನಿಂದ ಸಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಮದುಮಗಳು ಮತಚಲಾಯಿಸಿದ್ದು ವಿಶೇಷವಾಗಿತ್ತು. ಮೂಡಿಗೆರೆಯಲ್ಲಿ ಮದುವೆ ಇರುವ ಹಿನ್ನೆಲೆ ಹಸೆಮಣೆ ಏರುವ ಮೊದಲೇ ಕುಟುಂಬದ ಸದಸ್ಯರ ಜೊತೆಗೆ ಮದುಮಗಳು ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ್ದಾರೆ. ಹಸೆಮಣೆಗೂ ಮುನ್ನ ತಮ್ಮ ಜವಾಬ್ದಾರಿ ಮೆರೆದ ಮಧುಮಗಳು ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ರಂಭಾಪುರಿ ಶ್ರೀಗಳ ಮೊದಲ ಮತದಾನದ ಬಳಿಕ ಉಳಿದವರು ಮತದಾನ:
ಚಿಕ್ಕಮಗಳೂರು: ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ವೀರಸೋಮೇಶ್ವರ ಮಹಾಸ್ವಾಮಿಜಿಗಳು ಸಂದೇಶ ನೀಡಿದ್ದಾರೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 209 ರಲ್ಲಿ ಮತದಾನ ಮಾಡಿದ ಶ್ರೀಗಳು ನಾಡಿನ ಜನತೆಗೆ ಸಂದೇಶ ಸಾರಿದ್ದಾರೆ.

ಬಾಳೆಹೊನ್ನೂರಿನ ಮತಗಟ್ಟೆಯಲ್ಲಿ ಶ್ರೀಗಳ ಮತದಾನ ಬಳಿಕ ಉಳಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ, ಏಳು ಗಂಟೆಗೆ ಮೊದಲ ಮತದಾನ ಮಾಡಿದ ರಂಭಾಪುರಿ ಶ್ರೀಗಳು ಬಳಿಕ ನಾಡಿನ ಸಮಸ್ತ ಜನತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ.

80 ವರ್ಷದ ವೃದ್ಧೆಯಿಂದಲು ಮತದಾನ:
ಚಿಕ್ಕಮಗಳೂರು: ಸಿ.ಟಿ.ರವಿ ಬೂತ್ ನಲ್ಲಿ ಮೊದಲ ಮತದಾನ ಮಾಡಿದ್ದು, 80 ವರ್ಷದ ವೃದ್ಧೆಯಿಂದಲು ಮತಚಲಾಯಿಸಿದರು. ಚಿಕ್ಕಮಗಳೂರು ನಗರದಲ್ಲಿ ತರಕಾರಿ ಮಾರುವ ವೃದ್ಧೆ ಕಣ್ಣಮ್ಮರಿಂದ ಮತದಾನದ ಮಾಡಿ ಎಲ್ಲರ ಗಮನ ಸೆಳೆದರು.

Most Popular

Recent Comments