ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ನೀರಿನ ಟ್ಯಾಂಕರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಕಿಶನ್ (19)ಮೃತ ಪಟ್ಟ ಯುವಕ.
ಇದನ್ನೂ ಓದಿ; ಎನ್ ಆರ್ ಪುರದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಹೆಚ್ಚಿದ ಭಯ
ನಗರದ ಹೊರಹೊಲಯದಲ್ಲಿರುವ ಅಗಸವಳ್ಳಿಯಲ್ಲಿ ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಗೆ ಡಿಕ್ಕಿ ಉಂಟಾಗಿದ್ದು, ಪರಿಣಾಮ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಕಿಶನ್ ಗೋವಿಂದಾಪುರದ ನಿವಾಸಿಯಾಗಿದ್ದ ವೀರೇಶ್ ನಾಯ್ಕ ಅವರ ಪುತ್ರ ಆಗಿದ್ದಾನೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- 5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ
- ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
- ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ
ಶಿವಮೊಗ್ಗ ನಗರದಲ್ಲಿ ಗಾರೆ ಕೆಲಸಕ್ಕೆಂದು ಗೋವಿಂದಾಪುರದಿಂದ ಲಕ್ಷಣ.ಪಿ ಎಂಬುವರ ಜೊತೆ ಬೈಕ್ ನಲ್ಲಿ ನಿನ್ನೆ ಬೆಳಿಗ್ಗೆ ಬರುವಾಗ ಅಪಘಾತ ಸಂಭವಿಸಿದೆ. ಇನ್ನು ನೀರಿನ ಟ್ಯಾಂಕರ್ ಲಾರಿಯ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ
ಕೊನೆಗೂ ಮೂಡಿಗೆರೆ ಹಾಗೂ ತರೀಕೆರೆಯ ಟಿಕೆಟ್ ಘೋಷಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಕಡೆಯ ಪಟ್ಟಿಯಲ್ಲಿ 43 ಜನರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಕೊನಗೂ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ 2 ಎರಡು ಪಟ್ಟಿ ಬಿಡುಗಡೆಗೊಳಿಸಿದ್ದ ಕಾಂಗ್ರೆಸ್ ಟಿಫ್ ಫೈಟ್ ಇರೋ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿತ್ತು. ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕ್ ಮಾನೇಜರ್ ವಿರುದ್ಧ ದೂರು
ಇನ್ನೂ ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮಗೆ ಟಿಕೆಟ್ ಫೈನಲ್ ಆಗಿದೆ. ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಶ್ರೀನಿವಾಸ್ ಅವರಿಗೆ ಟಿಕೆಟ್ ಫೈನಲ್ ಆಗಿದೆ.
ಮೂಡಿಗೆರೆಯಿಂದ ಕಾಂಗ್ರೆಸ್ ನಲ್ಲಿ 5ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳಿದ್ದರು, ನಯನ ಮೋಟಮ್ಮಗೆ ಟಿಕೆಟ್ ನೀಡಬಾರದೆಂದು ಹಲವು ಬಾರಿ ಬಹಿರಂಗ ಸಭೆ ಮಾಡಿದ್ದರು. ನಯನ ಮೋಟಮ್ಮ ಇಲ್ಲಿಯವರಲ್ಲ ಅವರು ಹೊರಗಿನವರು, ಮೋಟಮ್ಮ ಅವರ ಮಗಳು ಎನ್ನುವುದೇ ಚುನಾವಣೆಗೆ ಸ್ಪರ್ಧಿಸಲು ಮಾನದಂಡವಾಗುವುದಿಲ್ಲ ಎಂಬ ಮಾತುಗಳು ಮೂಡಿಗೆರೆಯ ಕಾಂಗ್ರೆಸ್ ಆಕಾಂಕ್ಷಿಗಳಿಂದ ಕೇಳಿಬಂದಿತ್ತು. ತೀವ್ರ ವಿರೋಧದ ನಡುವೆಯೂ ನಯನ ಮೋಟಮ್ಮಗೆ ಕೈ ಟಿಕೆಟ್ ಘೋಷಣೆ ಮಾಡಿದೆ.
ಇದನ್ನೂ ಓದಿ; ಒಟಿಪಿ ಹೇಳಿದ ಮರುಕ್ಷಣವೇ ಖಾತೆಯಲ್ಲಿದ್ದ ಹಣ ಮಾಯ
ಇನ್ನು ತರೀಕೆರೆಯಲ್ಲಿ ಗೋಪಿಕೃಷ್ಣ ಪ್ರಭಲ ಆಕಾಂಕ್ಷಿಯಾಗಿದ್ದರು. ಲಿಂಗಾಯಿತ ನಾಯಕ ದೋರನಾಳು ಪರಮೇಶ್ ಕೂಡ ರೇಸ್ ನಲ್ಲಿದ್ದರು. ಇತ್ತೀಚಿಗಷ್ಟೇ ದೋರನಾಳು ಪರಮೇಶ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಕೊಟ್ಟು ಈ ಬಾರಿ ದೋರನಾಳ್ ಪರಮೇಶ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಆದರೆ ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಶ್ರೀನಿವಾಸ್ ಗೆ ಟಿಕೆಟ್ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಟಿಕೆಟ್ ಘೋಷಣೆ ಮಾಡಿದ್ದು, ಬಾರೀ ಗೊಂದಲವಿರುವ ಚಿಕ್ಕಮಗಳೂರಿನ ಟಿಕೆಟ್ ಬಾಕಿ ಉಳಿಸಿಕೊಂಡಿದೆ.