Sunday, June 4, 2023
Homeರಾಜ್ಯಭೀಕರ ರಸ್ತೆ ಅಪಘಾತ : ಮೂವರು ಸಾವು!!

ಭೀಕರ ರಸ್ತೆ ಅಪಘಾತ : ಮೂವರು ಸಾವು!!

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಈ ಅಪಘಾತವು ಘಟಪ್ರಭ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುನಶ್ಯಾಲ್ ಗ್ರಾಮದಲ್ಲಿ ಕಾರ್ ವೊಂದು ಗೋಕಾಕ್ ಕಡೆ ತೆರಳುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದು ಈ ಅವಘಡ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರೊಂದು 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಜನ ಮೃತಪಟ್ಟ ದುರ್ಘಟನೆ ನಡೆದಿದೆ.

ಗೋಕಾಕದಿಂದ ಹುಣಶ್ಯಾಲದ ಕಡೆ ಹೊರಟಿದ್ದ, ಎರಡು ಬೈಕ್ ಗಳಿಗೆ ಎದುರಿಗೆ ಮೂಡಲಗಿಯಿಂದ ಗೋಕಾಕ ಕಡೆ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಮೃತ ದುರ್ದೈವಿಗಳನ್ನು ಹುಣಶ್ಯಾಳದ ನಾಗಪ್ಪ ಮಗ್ಯಾಪ್ಪಗೋಳ, ಗೋಪಾಲ ಮತ್ನಾಳ ಎಂದು ಗುರುತಿಸಲಾಗಿದ್ದು, ಓರ್ವ ಮಹಿಳೆ ಕೂಡ ಮೃತರಾಗಿದ್ದಾರೆ.

ಸ್ವಿಫ್ಟ್ ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟಪ್ರಭಾ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Most Popular

Recent Comments