Thursday, June 8, 2023
Homeರಾಜಕೀಯಹೆಚ್. ಡಿ ಕುಮಾರಸ್ವಾಮಿ ಅವರು ಹೇಳುವ ಕ್ರಾಂತಿಕಾರಿ ಮಾತುಗಳು ' ನಾನ್ ಸೆನ್ಸ್ ' -ನಟ...

ಹೆಚ್. ಡಿ ಕುಮಾರಸ್ವಾಮಿ ಅವರು ಹೇಳುವ ಕ್ರಾಂತಿಕಾರಿ ಮಾತುಗಳು ‘ ನಾನ್ ಸೆನ್ಸ್ ‘ -ನಟ ಚೇತನ್

ಬೆಂಗಳೂರು: ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತೇನೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ಹೇಳಿದ ಮಾತುಗಳು ನಾನ್ ಸೆನ್ಸ್ ಎಂದು ನಟ ಚೇತನ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಚೇತನ್, ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ‍್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೊದಲಿಗೆ, 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡಾ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಿಲ್ಲ, ಪ್ರಯತ್ನವನ್ನು ಸಹ ಮಾಡಲಿಲ್ಲ. ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಇವುಗಳೆಲ್ಲಾ ನಾನ್ ಸೆನ್ಸ್ ಪದಗಳು ಎಂದು ಚೇತನ್ ಹೇಳಿದ್ದಾರೆ.

ಚೇತನ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್ ಕಣಗಾಲ್, ತಾವೊಬ್ಬ ಹೋರಾಟಗಾರ ಎಂದು ಬಿಂಬಿಸಿಕೊಳ್ಳುವ ಚೇತನ್, ರಾಷ್ಟ್ರವಾದಿ ನಟಿಯರಂತೆ ಕೇವಲ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಿ ವಿಫಲ ನಟನಾಗಿ ಉಳಿದಿದ್ದಾರೆ. ಯಾವ ವಿಷಯವನ್ನು ಅರಿಯದೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.

 

Most Popular

Recent Comments