ಟೊಕಿಯೊ: 2019 ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾರವರು ಟೊಕಿಯೊ ಒಲಿಂಪಿಕ್ಸ್ ನ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿ ಪದಕ ಪಡೆಯುವ ಭರವಸೆಯನ್ನು ಮೂಡಿಸಿದ್ದಾರೆ.
57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾದ ಟೈಗ್ರೇರೋಸ್ ಉರ್ಬಾನೋ ಅವರನ್ನು ಮಣಿಸಿದ ರವಿ ಕುಮಾರ್ ದಹಿಯಾರವರು ಕ್ವಾರ್ಟರ್ ಫೈನಲ್ ಗೆ ಅರ್ಹತೆಯನ್ನು ಪಡೆದಿದ್ದಾರೆ.
ಇದಾದ ನಂತರ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ರವಿ ಕುಮಾರ್ ದಹಿಯಾ ಎದುರಿಸಲಿದ್ದಾರೆ. ದಹಿಯಾ ಅವರಿಗಿದು ಸುಲಭವಾದ ಸವಾಲು ಎಂದು ಅಂದಾಜಿಸಲಾಗುತ್ತಿದೆ.