ಲಖ್ನೋ: ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದಾಗಿ ಆದೇಶವನ್ನು ಹೊರಡಿಸಿದ್ದರೂ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ತನಕ ರೈತರು ಪ್ರತಿಭಟನೆಯನ್ನು ಮುಂದುವರೆಸುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಯನ್ನು ನಿಲ್ಲಿಸಿ ಕದನ ವಿರಾಮಕ್ಕೆ ಕರೆ ನೀಡಿರುವುದು ಸರ್ಕಾರವೇ ಹೊರತು ರೈತರಲ್ಲ. ದೇಶದಲ್ಲಿರುವ ರೈತರು, ಯುವಕರು, ಕೂಲಿ ಕಾರ್ಮಿಕರು ಒಗ್ಗೂಡಿ ಹೋರಾಟವನ್ನು ನಡೆಸುವ ಸಂದರ್ಭ ಇಂದು ಎದುರಾಗಿದೆ. ಕೃಷಿ ಕಾಯಿದೆಗೆ ಹೊರಡಿಸಿದ ಕಾನೂನುಗಳ ವಿರುದ್ಧ ಹಾಗೂ ಬಿಜೆಪಿಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ ಆದರೂ ಬಿಜೆಪಿಯನ್ನು ಬೆಂಬಲಿಸಬೇಕೋ ಅಥವಾ ವಿರೋಧಿಸಬೇಕೋ ಎಂಬುದನ್ನು ಚುನಾವಣಾ ದಿನಾಂಕ ಪ್ರಕಟಿಸಿದಾಗ ನಿರ್ಧರಿಸಲಾಗುತ್ತದೆ ಎಂದು ಟಕಾಯತ್ ಹೇಳಿದರು.