ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎರಡು ಕಡೆ ನಿಂತಿರುವುದು ಸರಿಯೋ ತಪ್ಪೋ ಗೊತ್ತಿಲ್ಲ, ಪಕ್ಷ ನಿಲ್ಲಲು ಹೇಳಿತ್ತು, ಪಕ್ಷದ ಶಿಸ್ತಿನ ಸಿಪಾಯಿ, ಹಾಗಾಗಿ ನಿಂತೆ ಆದರೆ ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡ ಇಲ್ಲ ಕನಕಪುರದಲ್ಲಿ 75 ವರ್ಷದಲ್ಲಿ 5000 ಮತ ದಾಟಿಲ್ಲ ಆದರೆ ಈ ಬಾರಿ ಹೋರಾಟ ಮಾಡಿ 19500 ಮತ ತೆಗೆದುಕೊಂಡಿದ್ದೇನೆ ಎಂದು ಅಧಿಕಾರ ಕಳೆದುಕೊಂಡ ಬಿಜೆಪಿ ಸೋಲಿನ ಬಗ್ಗೆ ಆರ್.ಅಶೋಕ್ ಹೇಳಿದರು.
ಇದನ್ನೂ ಓದಿ; ಚಿಕ್ಕಮಗಳೂರು: ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಲು ಬಿಜೆಪಿಗೆ ಸಾಂದರ್ಭಿಕ ಸೋಲು ಅಷ್ಟೇ ಒಳಮೀಸಲಾತಿ, ಎಸ್ಟಿಗಳಿಗೆ 5% ಮೀಸಲಾತಿ ಜಾಸ್ತಿ ಮಾಡಿದ್ದು ಯಾರಿಗೆ ಬೆನಿಫಿಟ್ ಸಿಕ್ಕಿದ್ಯೋ ಅವರು ನಮ್ಮ ಜೊತೆ ನಿಂತರೋ ಇಲ್ವೋ ಗೊತ್ತಿಲ್ಲ, ಯಾರಿಗೆ ಸೌಲಭ್ಯ ಸಿಕ್ಕಿಲ್ಲ ಅವರು ನಮ್ಮ ವಿರುದ್ಧ ಇರೋದು ಕಾಣುತ್ತಿದೆ. ಮೀಸಲಾತಿ ಹೊಡೆತ ಬಿದ್ದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಪಕ್ಷದ ವೇದಿಕೆಯಲ್ಲಿ ಇದನ್ನೆಲ್ಲಾ ಚರ್ಚೆ ಮಾಡ್ತೀವಿ ಎಂದು ಹೇಳಿದರು.
ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ -23.06.2023
ಡಿ ಕೆ ಶಿವಕುಮಾರ್ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ:
ಡಿ ಕೆ ಶಿವಕುಮಾರ್ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ. ಡಿಕೆಶಿ ಅವರದ್ದು ಒಂದು ರೀತಿ ಅತಿರೇಕದ ನಡೆ. ಸಿದ್ದರಾಮಯ್ಯ ಬಿಟ್ಟುಕೊಡಲ್ಲ, ನಂಗೆ ಸಿಎಂ ಸ್ಥಾನ ಸಿಗುವುದಿಲ್ಲ ಎನ್ನುವ ಗ್ಯಾರಂಟಿಯಿದೆ. ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಇದೇನು ಸಮ್ಮಿಶ್ರ ಸರ್ಕಾರವೇ ಎಂದು ಯಾರಿಗೆ ಹೇಳಿದ್ದಾರೆ, ಅದು ಡಿಕೆಶಿಗೆ ಹೇಳಿದ್ದು ಎಂದು ಜಗಜ್ಞಾಹೀರು ಎಂದು ಅಶೋಕ್ ಹೇಳೀದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ತೀರ್ಥಹಳ್ಳಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ
- ಕಾರು ಹಾಗೂ ಮಿನಿ ಕ್ಯಾಂಟರ್ ವಾಹನದ ನಡುವೆ ಅಪಘಾತ
- ಚಿಕ್ಕಮಗಳೂರು: ನಿಧಿಗಾಗಿ ಮಧ್ಯರಾತ್ರಿ 25 ಅಡಿ ಆಳದ ಗುಂಡಿ ತೆಗೆದ ದುಷ್ಕರ್ಮಿಗಳು
ಡಿಕೆ ಶಿವಕುಮಾರ್ ಈಗಿನಿಂದಲೇ ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಹೊರಟಿದ್ದಾರೆ. ಕಿರಿಕಿರಿ ಬೀದಿಗೆ ಬಂದರೆ ಈ ಸರಕಾರ ಬಿದ್ದು ಹೋಗುತ್ತದೆ. ಸಿಎಂ ಆದವರು ಹಿಂದಿನ ಸಿಎಂರನ್ನು ಭೇಟಿ ಮಾಡುವುದು ಮಾಮೂಲಿ. ನಾನು ಡಿಸಿಎಂ ಆಗಿದೆ, ಆದರೆ ನಿವೃತ್ತ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದು ಅಶೋಕ್ ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕನ ಆಯ್ಕೆಯ ಬಗ್ಗೆ ಮಾತನಾಡಿದ ಅಶೋಕ್, ಜುಲೈ 3ರಂದು ವಿಪಕ್ಷ ನಾಯಕನ ಬಗ್ಗೆ ಘೋಷಣೆ ಮಾಡುತ್ತಾರೆ ಎಂದರು.
ಚಿಕ್ಕಮಗಳೂರು: ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣ; ನ್ಯಾಯ ಸಿಗದ ಹಿನ್ನಲೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಪತ್ರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 5 ವರ್ಷದ ಹಿಂದೆ ಬಿಜೆಪಿ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಆರೋಪಿಗಳು ಪತ್ತೆಯಾಗದೆ ಹಿನ್ನಲೆಯಲ್ಲಿ ಬಿಜೆಪಿ ಮುಖಂಡನ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ; ಬಾಳೆಹೊನ್ನೂರು: ಫೇಸ್ಬುಕ್ ನಲ್ಲಿ ಸಿಎಂ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಆರೋಪ; ಕೇಸ್ ದಾಖಲು
ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಿ.ಟಿ ರವಿ ಆಪ್ತನಾಗಿದ್ದ ಅನ್ವರ್ ನನ್ನು ನಗರದ ಗೌರಿ ಕಾಲುವೆ ಬಳಿ ಚಾಕುವಿನಿಂದ 13 ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ನಂತರ ಬಿಜೆಪಿ ಸರ್ಕಾರ ಇದ್ದಾಗಲೂ ಸರಿಯಾದ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ತೀರ್ಥಹಳ್ಳಿ: ವಿಧ್ಯಾರ್ಥಿನಿಯ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ; ಪ್ರತಿಭಟನೆ
ಅನ್ವರ್ ಹತ್ಯೆ ಪ್ರಕರಣವನ್ನ ಹಿಂದಿನ ಬಿಜೆಪಿ ಸರ್ಕಾರ ಸಿಐಡಿಗೆ ಒಪ್ಪಿಸಿದ್ದರು. 5 ವರ್ಷವಾದರೂ ಹಂತಕರನ್ನು ಬಂಧಿಸಿಲ್ಲ. ಹಾಗಾಗಿ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.