ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಸರ್ಕಾರದ ಮೂಲಗಳು ಮಾಹಿತಿಯನ್ನು ನೀಡಿದೆ.
ನಟ ಪುನೀತ್ ರಾಜ್ ಕುಮಾರ್ ರವರು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಉತ್ತಮ ನಟ ಉತ್ತಮ ಡ್ಯಾನ್ಸರ್ ಲಕ್ಷಾಂತರ ಅಭಿಮಾನಿಗಳ ದೇವರು ಆಗಿದ್ದರು. ಇವರು ಅಕಾಲಿಕ ಮರಣದಿಂದ ನೊಂದ ಅಭಿಮಾನಿಗಳು ಪುನೀತ್ ರವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.
ಈ ಕಾರಣದಿಂದ ನವೆಂಬರ್ 16 ರ ನಂತರ ಸರ್ಕಾರದ ಮಟ್ಟದಲ್ಲಿ ಮತ್ತು ಪುನೀತ್ ರಾಜ್ ಕುಮಾರ್ ರವರ ಕುಟುಂಬದವರೊಡನೆ ಚರ್ಚಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿಯನ್ನು ನೀಡಿದೆ.