Sunday, June 4, 2023
Homeಇತರೆಭಾನುವಾರ ಪುನೀತ್ ರಾಜಕುಮಾರ್ ಅಂತ್ಯ ಸಂಸ್ಕಾರ ನಡೆಸಲು ನಿರ್ಧಾರ : ಸಿಎಂ ಬೊಮ್ಮಾಯಿ

ಭಾನುವಾರ ಪುನೀತ್ ರಾಜಕುಮಾರ್ ಅಂತ್ಯ ಸಂಸ್ಕಾರ ನಡೆಸಲು ನಿರ್ಧಾರ : ಸಿಎಂ ಬೊಮ್ಮಾಯಿ

ಬೆಂಗಳೂರು: ನಟ ಪುನೀತ್‌ ರಾಜ್ ಕುಮಾರ್ ರವರ ಅಂತಿಮ ಸಂಸ್ಕಾರವನ್ನು ಅ.31 ಭಾನುವಾರದಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿಯನ್ನು ನೀಡಿದರು.

ಪುನೀತ್‌ ಅವರ ಪುತ್ರಿ ಧೃತಿ ನ್ಯೂಯಾರ್ಕ್ ನಿಂದ ನೆನ್ನೆ ಹೊರಟಿದ್ದು ಇಂದು ಮಧ್ಯಾಹ್ನ ದೆಹಲಿಗೆ ತಲುಪಿದ್ದಾರೆ.

ದೃತಿ ಬೆಂಗಳೂರಿಗೆ ತಲುಪುವುದು ಸಂಜೆ 6 ಗಂಟೆ ಆಗುವುದರಿಂದ ಸಂಜೆಯ ನಂತರ ಅಂತ್ಯಕ್ರಿಯೆಯನ್ನು ನಡೆಸುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರವನ್ನು ಭಾನುವಾರ ನೆರವೇರಿಸಲು ರಾಜಕುಮಾರ್‌ ಕುಟುಂಬಸ್ಥರ ಜೊತೆ ಚರ್ಚೆಯನ್ನು ಮಾಡಿ ನಿರ್ಧರಿಸಲಾಗಿದೆ ಎಂದು ಸಿಎಂ ಅಭಿಮಾನಿಗಳಿಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

Most Popular

Recent Comments