Sunday, October 1, 2023
Homeಇತರೆಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿಅವಮಾನ ಮಾಡಿದ ಕಿಡಿಗೇಡಿಗಳು.

ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿಅವಮಾನ ಮಾಡಿದ ಕಿಡಿಗೇಡಿಗಳು.

ಬೆಂಗಳೂರು: ಪುನೀತ್ ರಾಜ್ ಕುಮಾರ್ ರವರ ನಿಧನದ ಹಿನ್ನೆಲೆ ಅಭಿಮಾನಿಗಳು ಹಾಕಿದ್ದ ಬ್ಯಾನರ್ ಕಟೌಟ್ ನನ್ನು ಹರಿದು ಬೆಂಕಿ ಹಚ್ಚಿ ಅವಮಾನ ಮಾಡಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ಯುವರತ್ನ, ನಟ ಸಾರ್ವಭೌಮ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಕರುನಾಡು ಸಂಪೂರ್ಣವಾಗಿ ಶೋಕ ಸಾಗರದಲ್ಲಿ ಮುಳುಗಿಹೋಗಿದೆ, ಇಡೀ ರಾಜ್ಯದ್ಯಂತ ಅಭಿಮಾನಿಗಳು ಪುನೀತ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಕ್ಯಾಂಡಲ್ ಬೆಳಗಿ ಶ್ರದ್ದಾಂಜಲಿಯನ್ನು ಸಲ್ಲಿಸಿದ್ದರು. ಹಾಗೂ ದೇಶದ ಅನೇಕ ಗಣ್ಯವ್ಯಕ್ತಿಗಳು ಆಗಮಿಸಿ ಸಂತಾಪವನ್ನು ಸೂಚಿಸಿದ್ದರು ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ.

ಶುಕ್ರವಾರ ಕನ್ನಡದ ಹೆಮ್ಮೆಯ ನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ನಿಧನರಾದ ಹಿನ್ನೆಲೆ ವಿಜಯಪುರದ ಅಪ್ಪು ಅಭಿಮಾನಿಗಳು ಭಾವಚಿತ್ರಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿ ನಗರದಲ್ಲಿ ಬ್ಯಾನರ್ ಕಟೌಟ್ ಹಾಕಿದ್ದರು. ಆದರೆ ರಾತ್ರಿಯ ವೇಳೆ ಭಾವಚಿತ್ರಕ್ಕೆ ಕಿಡಿಗೇಡಿಗಳು ಬೆಂಕಿ ಯನ್ನು ಹಚ್ಚಿದ್ದಾರೆ. ಈ ಘಟನೆ ವಿಜಯಪುರ ನಗರದ ಆಶ್ರಮ ಬಳಿ ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಪುನೀತ್ ಅಭಿಮಾನಿಗಳು ಪೊಲೀಸರನ್ನು ಅಗ್ರಹಿಸಿದ್ದಾರೆ.

Most Popular

Recent Comments