ಮೈಸೂರು : ಪುನೀತ್ ರಾಜ್ ಕುಮಾರ್ ನಿಧನದಿಂದ ಅಘಾತಕೊಳ್ಳಗಾಗಿದ್ದ ವಿದ್ಯಾರ್ಥಿಯೊಬ್ಬಳು ಬ್ಲೇಡಿನಿಂದ ಕೈಮೇಲೆ ಅಪ್ಪು ಎಂದು ಹೆಸರನ್ನು ಬರೆದುಕೊಂಡು ಅಸ್ವಸ್ಥಳಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ನಗರದ ಹಾಸ್ಟೆಲ್ ವೊಂದರಲ್ಲಿ ಪದವಿ ವ್ಯಾಸಂಗವನ್ನು ಮಾಡುತ್ತಿದ್ದ ಈಕೆ, ನಟ. ಪುನೀತ್ ರಾಜ್ ಕುಮಾರ್ ನ ಅಗಲಿಕೆಯಿಂದ ತೀವ್ರ ಆಘಾತಕ್ಕೂಳಗಾಗಿ ಬ್ಲೇಡ್ ನಿಂದ ತನ್ನ ಕೈಮೇಲೆ “ಅಪ್ಪು” ಎಂದು ಬರೆದುಕೊಂಡು ಆ ರಕ್ತದಿಂದ ಬಿಳಿ ಹಾಳೆಗಳು ಮತ್ತು ಕರವಸ್ತ್ರದ ಮೇಲೆ ಐ ಲವ್ ಯೂ ಅಪ್ಪು, ಐ ವಾಂಟ್ ಯು, ಎಂದು ಬರೆದುಕೊಂಡು ಅಸ್ವಸ್ಥಳಾಗಿದ್ದಳು. ನಂತರ ಈಕೆಯ ಸಹಪಾಠಿಗಳು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ.