Friday, April 19, 2024
Homeಮಲೆನಾಡುಚಿಕ್ಕಮಗಳೂರುಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!

ಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ)ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದು, ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಿಡುಗಡೆಯಾಗುತ್ತಿದೆ. ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ಕೆಲ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೂ ರಾಜೀನಾಮೆ ನೀಡಿದ್ದಾರೆ, ಇನ್ನೂ ಕೆಲ ಅಭ್ಯರ್ಥಿಗಳು ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ; ಕಾಂಗ್ರೆಸ್ ಮುಖಂಡನ ತಾಯಿ ನೇಣು ಬಿಗಿದು ಆತ್ಮಹತ್ಯೆ

ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು

ಇನ್ನೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಪುನೀತ್ ಪೂಜಾರಿ ರವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆಂದು ಸಂಘಟನೆಯ ಪ್ರಮುಖರಾದ ರವಿಕುಮಾರ್ ತಿಳಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಅಧಿಕಾರಕ್ಕಾಗಿ ಅಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಸಂಘಟನೆಯ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಮಲ್ನಾಡ್ ಕೇಸರಿ ಸೇನೆ ಸಂಘಟನೆಯಿಂದ ಪುನೀತ್ ರವರನ್ನು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಇದೇ 18 ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಬಾರಿ ಬಂಡಾಯ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಅವರು ಈ ಬಾರಿಯೂ ಹಿಂದು ಬ್ರಿಗೇಡ್ ಮೂಲಕ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಿನ್ನೆ ಪ್ರವೀಣ್ ಖಾಂಡ್ಯ ಹಾಗೂ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಅವರು ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿ ಸಂಧಾನ ಮಾತುಕತೆ ನಡೆಸಿದ್ದಾರೆ. ಈ ಬಾರಿ ಹಿಂದು ಬ್ರಿಗೇಡ್ ನಿಂದ ಸ್ಪರ್ಧಿಸದೆ ಹಿಂದುತ್ವದ ಉಳಿವಿಗಾಗಿ ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಘೋಷಿಸಿದ್ದಾರೆ. ಒಂದೆಡೆ ಬಿಜೆಪಿ ಹಿಂದು ಬ್ರಿಗೇಡ್ ನ ತಲೆನೋವು ತಪ್ಪಿದ್ದರೆ ಈಗ ಇನ್ನೊಂದೆಡೆ ಮತ್ತೆ ಮಲ್ನಾಡ್ ಕೇಸರಿ ಸೇನೆ ಹೆಸರಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ವಿರುದ್ಧ ಬಂಡಾಯ ಮತ್ತೆ ತಲೆನೋವಾಗಿ ಪರಿಣಮಿಸಿದೆ.

Most Popular

Recent Comments