Sunday, June 4, 2023
Homeಇತರೆಪುನೀತ್ ರಾಜ್ ಕುಮಾರ್ ರವರ ಫೋಟೋವನ್ನು ಬಳಸಿಕೊಂಡು ಲಾಭಗಳಿಸಲು ಜಾಹೀರಾತು ಹಾಕಿದ ಕಂಪನಿ: ಆಕ್ರೋಶಗೊಂಡ ಜನರು

ಪುನೀತ್ ರಾಜ್ ಕುಮಾರ್ ರವರ ಫೋಟೋವನ್ನು ಬಳಸಿಕೊಂಡು ಲಾಭಗಳಿಸಲು ಜಾಹೀರಾತು ಹಾಕಿದ ಕಂಪನಿ: ಆಕ್ರೋಶಗೊಂಡ ಜನರು

ಬೆಂಗಳೂರು : ಹೃದಯಘಾತದಿಂದ ಮೃತಪಟ್ಟ ಕರುನಾಡ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ರವರನ್ನು ಕೆಲವು ಕಿರಾತಕರು ಅವರ ಸಾವಿನಲ್ಲಿಯೂ ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ.

ಪುನೀತ್‌ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಲವಾರು ಯುವಕರು ತಮ್ಮ ಹೃದಯದ ಬಗ್ಗೆ ಭಯಪಟ್ಟು ಹೃದಯ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದನ್ನೇ ಲಾಭವನ್ನಾಗಿ ಮಾಡಿಕೊಂಡಿರುವ ಕೆಲವು ಕಂಪನಿಗಳು ಪುನೀತ್‌ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ನೆಪವೊಡ್ಡಿ ತಮ್ಮ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು ಮುಂದಾಗಿದ್ದಾರೆ. ಒಂದು ಜಾಹೀರಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಆ ಜಾಹಿರಾತಿನಲ್ಲಿ ” ನಮ್ಮ ಡೈಗ್ನಾಸ್ಟಿಕ್ಸ್​ ಕೇಂದ್ರದಲ್ಲಿ ಇಸಿಜಿ ಸೇರಿ ಹಲವು ಸೌಲಭ್ಯಗಳು ಇವೆ. ಇದಕ್ಕೆ ಆಫರ್​ ಕೂಡ ಇದೆ” ಎಂದು ಕ್ರೆಡೆಂಡ್‌ ಡಯಾಗ್ನಿಸ್ಟಿಕ್ಸ್‌ ಕಂಪೆನಿ ಈ ಜಾಹೀರಾತನ್ನು ಹಾಕಿಕೊಂಡಿದೆ.

ಜಾಹೀರಾತಿನ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಎಂದು ಅವರ ಫೋಟೋ ಹಾಕಿ ಅದರ ಕೆಳಗೆ ತಮ್ಮ ಕಂಪೆನಿಯ ಜಾಹೀರಾತು ನೀಡಿರುವುದು ಪುನೀತ್‌ ರಾಜಕುಮಾರ್ ರವರ ಅಭಿಮಾನಿಗಳು ಆಕ್ರೋಶಗೊಳ್ಳಲು ಎಡೆಮಾಡಿಕೊಟ್ಟಿದೆ ಅನೇಕ ಜನರು ಕಂಪನಿಯ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು “ಎಲ್ಲದರಲ್ಲೂ ಲಾಭ ಹುಡುಕುವ ರಣಹದ್ದುಗಳು” ಎಂದು ಹೇಳಿದ್ದಾರೆ.

Most Popular

Recent Comments