Saturday, June 10, 2023
Homeರಾಜ್ಯರಾಜ್ಯದಾದ್ಯಂತ ಪ್ರಥಮ ಪಿಯುಸಿಗೆ ಪ್ರವೇಶ ಆರಂಭ - ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್,...

ರಾಜ್ಯದಾದ್ಯಂತ ಪ್ರಥಮ ಪಿಯುಸಿಗೆ ಪ್ರವೇಶ ಆರಂಭ – ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್, ಸ್ನೇಹಲ್ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ದಿನವೇ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗೆ ಆರಂಭವಾಗಿದ್ದು ಆಗಸ್ಟ್ 31ರವರೆಗೆ ಮುಂದುವರಿಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್ ಸ್ನೆಹಲ್ ತಿಳಿಸಿದ್ದಾರೆ.

ದಾಖಲಾತಿಯ ಸಮಯದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಗಸ್ಟ್ 16 ರಿಂದ ಆನ್ ಲೈನ್ ತರಗತಿಗಳು ಪ್ರಾರಂಭವಾಗಲಿವೆ.

ಆಗಸ್ಟ್ 31ರ ನಂತರ ಪ್ರವೇಶ ಪಡೆಯುವವರಿಗೆ ಇಲಾಖೆಯು ದಂಡವನ್ನು ವಿಧಿಸಲಿದೆ. ಸೆಪ್ಟೆಂಬರ್ 1 ರಿಂದ 11 ರವರೆಗೆ ಪ್ರವೇಶವನ್ನು ಪಡೆದವರಿಗೆ 670 ರೂಪಾಯಿ ದಂಡ, ಸೆಪ್ಟೆಂಬರ್ 13 ರಿಂದ 25ರವರೆಗೆ ಪ್ರವೇಶ ಪಡೆದವರಿಗೆ 2.890 ರೂಪಾಯಿ ದಂಡ ವಿಧಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರವೇಶ ಪಡೆದು ಶುಲ್ಕ ಪಾವತಿಸಿದ ದಿನವೇ ಕಾಲೇಜುಗಳು ಇಲಾಖೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಪತ್ರ ಬರೆದಿರುವ ಅನುದಾನರಹಿತ ಖಾಸಗಿ ಶಾಲೆಗಳ ವ್ಯವಸ್ಥಾಪಕ ಒಕ್ಕೂಟ(ರೂಪ್ಸ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಪಿಯುಸಿ ಅಥವಾ ಅದಕ್ಕೆ ಸಮನಾದ ಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸಿಕೊಡಬೇಕೆಂದು ಕೋರಿದೆ.

ಈ ಸಂಬoಧ ಸರ್ಕಾರಕ್ಕೆ ಎರಡು ಬಾರಿ ಪತ್ರವನ್ನು ಬರೆಯಲಾಗಿದೆ. ಕಳೆದ ವರ್ಷ ಕೇವಲ 6.23 ಲಕ್ಷ ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಕಲ್ಪಿಸಲಾಗಿತ್ತು. ಈ ವರ್ಷ 8.7 ಲಕ್ಷ ರಾಜ್ಯ ಸರ್ಕಾರದ ಪಠ್ಯಕ್ರಮದಡಿ 1೦ನೇ ತರಗತಿ ತೇರ್ಗಡೆಯನ್ನು ಹೊಂದಿದ್ದು 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಕೋರುವ ಸಾಧ್ಯತೆಯಿದೆ ಎಂದು ರೂಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಹೆಚ್ಚುವರಿ 3 ಲಕ್ಷ ವಿದ್ಯಾರ್ಥಿಗಳಿಗೆ ಸಹ ಪಿಯುಸಿಗೆ ಪ್ರವೇಶ ಕೋರಲಾಗಿದೆ, ಪಿಯುಸಿ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನಿಯಮಿತ ಸಂಖ್ಯೆಯಿದ್ದರೂ ಈಗ ರಾಜಯದಲ್ಲಿ 1.234 ಕಾಲೇಜುಗಳಿವೆ ಹಾಗೂ ಆ ಕಾಲೇಜಿನಲ್ಲಿ 6.250 ಖಾಯಂ ಉಪನ್ಯಾಸಕರಿದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು ಎಂದು ತಾಳಿಕಟ್ಟೆಯವರು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ.

 

Most Popular

Recent Comments