ನವದೆಹಲಿ: ಸದ್ಯದಲ್ಲಿಯೇ ಚುನಾವಣೆ ಇರುವುದರಿಂದ ನರೇಂದ್ರ ಮೋದಿ ಸರ್ಕಾರ ಕೃಷಿ ಕಾಯ್ದೆಯನ್ನು ರದ್ದುಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಚಾರವನ್ನು ನಡೆಸುವ ವೇಳೆ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿಕೆಯನ್ನು ನೀಡಿದರು.
ದೇಶದಲ್ಲಿ ಚುನಾವಣೆಗಳು ಸಮೀಪಬರುತ್ತಿರುವುದರಿಂದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲು ತಯಾರಿಲ್ಲದಿರುವುದರಿಂದ ಹಾಗೂ ಸಮೀಕ್ಷೆಗಳಲ್ಲಿ ಈಗಾಗಲೇ ಬಿಜೆಪಿ ಪಕ್ಷ ದುರ್ಬಲ ಸ್ಥಿತಿಯಲ್ಲಿರುವುದರಿಂದ ನರೇಂದ್ರ ಮೋದಿ ಕೃಷಿ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
ಈ ದೇಶದಲ್ಲಿ ರೈತರಿಗಿಂತ ಬುದ್ದಿವಂತರು ಯಾರು ಇಲ್ಲ, ಅವರು ಎಲ್ಲವನ್ನು ನೋಡುತ್ತಾರೆ ಮತ್ತು ಅರಿತುಕೊಳ್ಳುತ್ತಾರೆ ಯಾರು ಏನು ಎಂಬುವುದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ರೈತರು ಹೊಂದಿದ್ದಾರೆ. ರೈತರನ್ನು ಯಾರು ಅನುಮಾನಿಸಬಾರದು ಎಂದು ಹೇಳಿದರು.