Tuesday, November 28, 2023
Homeಮಲೆನಾಡುಚಿಕ್ಕಮಗಳೂರುಶೃಂಗೇರಿ/ದೆಹಲಿ: ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು

ಶೃಂಗೇರಿ/ದೆಹಲಿ: ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು

ಶೃಂಗೇರಿ/ದೆಹಲಿ: (ನ್ಯೂಸ್ ಮಲ್ನಾಡ್ ವರದಿ) ದೆಹಲಿಯ ನೂತನ ಸಂಸತ್ ಭವನ ಭಾನುವಾರ ಲೋಕಾರ್ಪಣೆಗೊಳ್ಳುತ್ತಿದ್ದು ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೂ ಅವಿನಾಭವ ಸಂಬಕಧವಿದೆ. ಈ ಉದ್ಘಾಟನೆಯ ಪೂಜಾ ಕಾರ್ಯ ಕ್ರಮಗಳಿಗೆ ಶೃಂಗೇರಿ ಪೀಠದಿಂದ ಪುರೋಹಿತರು ತೆರಳಿದ್ದಾರೆ.

ಇದನ್ನೂ ಓದಿ; ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್ ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ಶೃಂಗೇರಿ ಮಠದಿಂದ ಸೀತಾ ರಾಮ ಶರ್ಮ, ಶ್ರೀ ರಾಮ ಶರ್ಮ ಮತ್ತು ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದಿ೦ದ ನಾರಗಾಜ ಅಡಿಗ, ಋಷ್ಯಶೃಂಗ ಭಟ್ಟ ಇವರು ಈಗಾಗಲೇ ತೆರಳಿದ್ದಾರೆ. ಉದ್ಘಾಟನೆಯ ಮುನ್ನ ಇವರಿಂದ ವಾಸ್ತು ಹೋಮ ವಾಸ್ತು ಪೂಜೆಗಳು ನಡೆಯಲಿವೆ. ಭಾನುವಾರ ಮಹಾಗಣಪತಿ ಹೋಮ ನಡೆಯಲಿದೆ ಎಂದು ತಿಳಿಸಿದರು.

2020 ರಲ್ಲಿ ಸಂಸತ್ ಭವನದ ಭೂಮಿಪೂಜೆ ನೆರವೇರಿಸಿದ ಶ್ರೀ ಶಿವಕುಮಾರ ಶರ್ಮಾ ಮಾಹಿತಿ ಹಚ್ಚಿಕೊಂಡಿದ್ದು, ಪ್ರಧಾನಿ ಮೋದಿ ಅವರ ಆಪೇಕ್ಷೆಯಂತೆ ಭಾರತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶೃಂಗೇರಿ ಮಠದಿಂದ ಡಾ.ಶಿವಕುಮಾರ ಶರ್ಮ, ಲಕ್ಷ್ಮೀನಾರಾಯಣ ಸೋಮಯಾಜಿ, ಶ್ರೀ ಗಣೇಶ ಸೋಮಯಾಜಿ ಹಾಗೂ ದೆಹಲಿಯ ಶೃಂಗೇರಿ ಶಾರದಾ ಪೀಠದ ಶಾಖಾ ಮಠದಿಂದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ಟ, ದೆಹಲಿಯ ಶಾರದ ಪೀಠದ ವೇದ ಶಾಲಾ ಅಧ್ಯಾಪಕ ರಾಘವೇಂದ್ರ ಭಟ್ಟ ಈ 6 ಜನ ವಿದ್ವಾಂಸರು ತೆರಳಿ ಭೂಮಿಪೂಜೆ ನೆರವೇರಿಸಿದ್ದರು ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಭೂಮಿಪೂಜೆ ಸಂದರ್ಭದಲ್ಲಿ ಪ್ರಧಾನಿಯವರೊಡನೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಯಿತು. ಶೃಂಗೇರಿ ಮಠದಿಂದ ಕೊಂಡೊಯ್ದ ಶಂಕು, ನವರತ್ನಗಳನ್ನು ಹಾಗೂ ಬೆಳ್ಳಿ ಇಟ್ಟಿಗೆ ಯನ್ನು ಅಂದು ಸ್ಥಾಪನೆ ಮಾಡಲಾಗಿತ್ತು.

ಈ ಭವ್ಯ ಭವನದಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದರು.

ಇದನ್ನೂ ಓದಿ; ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಸಿ.ಟಿ ರವಿ ಗೆ ಶಾಕ್ ನೀಡಲು ಶಾಸಕ ಹೆಚ್ ಡಿ ತಮ್ಮಯ್ಯ ಕಸರತ್ತು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಜಿ ಶಾಸಕ ಸಿಟಿ ರವಿಗೆ ಮತ್ತೊಂದು ಶಾಕ್ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

ಈ ಬಾರಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತನೆಯಾಗಿತ್ತು. ಸಿಟಿ ರವಿ ಆಪ್ತ ಬಣ್ಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯನೇ ಎದುರಾಳಿಯಾಗಿ ಸಿ.ಟಿ ರವಿಗೆ ಸೋಲಿನ ರುಚಿಯನ್ನು ತೋರಿಸಿದ್ದರು. ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.

ಎಚ್ ಡಿ ತಮ್ಮಯ್ಯ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ನಗರಸಭೆ ಆಡಳಿತವನ್ನು ಬಿಜೆಪಿಯಿಂದ ತಪ್ಪಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ. ಚಿಕ್ಕಮಗಳೂರು ನಗರಸಭೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಮೂಲಗಳ ಮಾಹಿತಿ ಪ್ರಕಾರ ವಿಧಾನಸಭಾ ಅಧಿವೇಶನ ಮುಗಿದ ಬಳಿಕ ನಗರಸಭಾ ಸದಸ್ಯರ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಎಚ್ ಡಿ ತಮ್ಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮೂವರು ನಗರಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸುವ ಮೂಲಕ ನಗರಸಭೆಯಲ್ಲಿ ಬಿಜೆಪಿ ಬಲವನ್ನು ತಗ್ಗಿಸುವ ಕಾರ್ಯತಂತ್ರವನ್ನು ಎಣಿದಿದ್ದಾರೆ.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಮೂವರು ಸದಸ್ಯರು ರಾಜೀನಾಮೆ ಕೊಟ್ಟರೆ ನಗರಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿತಗೊಳ್ಳಲಿದೆ ಆಗ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ಯೋಜನೆಯನ್ನು ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

Most Popular

Recent Comments