ಕಲಬುರಗಿ: ಪ್ರತಾಪ್ ಸಿಂಹ ಕೂಡಲೇ ಪ್ರಿಯಾಂಕಾ ಖರ್ಗೆಯವರ ಬಳಿ ಕ್ಷಮೆಯನ್ನು ಕೇಳಬೇಕು ಇಲ್ಲದಿದ್ದರೆ ಅವರ ಚಡ್ಡಿ ಬಿಚ್ಚಿ ಹೊಡಿತೀನಿ ಎಂದು ಹೇಳಿಕೆಯನ್ನು ಮಹಾಂತ ಶಿವಾಚಾರ್ಯ ಶ್ರೀ ನೀಡಿದ್ದಾರೆ.
ಕಲಬುರಗಿಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಪ್ರತಾಪ್ ಸಿಂಹ ಪ್ರಿಯಾಂಕ ಖರ್ಗೆ ಯವರ ಕುರಿತು ಟೀಕಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಾಂತ ಶಿವಾಚಾರ್ಯ ಶ್ರೀ ಅವಾಚ್ಯ ಪದಗಳಿಂದ ಆಡಿದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.
ಪ್ರಿಯಾಂಕ ಖರ್ಗೆಯನ್ನು ಗಂಡೋ? ಹೆಣ್ಣೋ? ಎಂದ ಪ್ರತಾಪ್ ಸಿಂಹ ನವರ ವಿರುದ್ಧ ಮಾತನಾಡಿದ ಮಹಾಂತ ಶಿವಾಚಾರ್ಯ. ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಯವರ ಬಳಿ ಪ್ರತಾಪ್ ಸಿಂಹ ಕ್ಷಮೆಯನ್ನು ಕೇಳದಿದ್ದರೇ ಅವರ ಮನೆಗೆ ಹೋಗಿ ಅವರ ಚಡ್ಡಿಯನ್ನು ಬಿಚ್ಚಿ ಹೊಡಿತೀನಿ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿ ನೆಟ್ಟಿಗರು ಇಂತಹ ಅವಾಚ್ಯ ಪದಗಳನ್ನು ಆಡಿದ ಸ್ವಾಮೀಜಿ ನಿಜವಾಗಿಯೂ ಸ್ವಾಮೀಜಿಯೇ? ಉತ್ತಮ ಮಾರ್ಗದರ್ಶನವನ್ನು ನೀಡುವ ಸ್ವಾಮೀಜಿ ಬಾಯಲ್ಲಿ ಇಂತಹ ಮಾತೇ? ಎಂದು ಜನರು ಹೇಳುತ್ತಿದ್ದಾರೆ.