ಗದಗ: ಪೇಜಾವರ ಗುರುಗಳ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ನೋಡಿದರೇ ಅವರ ಮನಸ್ಸಿನಲ್ಲಿ ಕಸ , ಕಲ್ಮಶ ತುಂಬಿಕೊಂಡಿರುವುದು ಕಾಣುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಂಸಲೇಖ ರವರ ವಿರುದ್ಧ ಕಿಡಿಕಾರಿದ್ದಾರೆ.
ಹಂಸಲೇಖರವರು ವಿಕೃತವಾಗಿ ಸ್ವಾಮೀಜಿಗಳ ಬಗ್ಗೆ ಮಾತನಾಡಿರುವುದನ್ನು ನೋಡಿದರೆ ಅವರ ಮನಸ್ಸಿನ ಒಳಗೆ ಕಸ, ಕಲ್ಮಶ ತುಂಬಿಕೊಂಡಿರಬಹುದು. ಸ್ವಾಮೀಜಿಗಳು ಮಾಂಸವನ್ನು ತೆಗೆದುಕೊಳ್ಳಬೇಕು ಎಂದು ಹೇಳಿರುವುದು ಅತ್ಯಂತ ಹೀನವಾಗಿರುವ ಮಾತು.
ನಿಮ್ಮ ಮನಸ್ಸು ಕಸದಿಂದ ತುಂಬಿಕೊಂಡಿದೆ, ಅದನ್ನು ತೆಗೆದುಹಾಕಿ ನಾವು ಗುರುಗಳು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಬೇಕು ದೇಶದಲ್ಲಿರುವ ಅಸ್ಪೃಶ್ಯತೆಯನ್ನು ತಡೆದುಹಾಕಲು ಕೊನೆಮಾಡಲು ಪೇಜಾವರ ಸ್ವಾಮೀಜಿ ಗಳು ಮುಂದಾಗಿದ್ದರು ಅಂತಹ ಮಹಾನ್ ವ್ಯಕ್ತಿಗೆ ಮಾಂಸ ತೆಗೆದುಕೊಳ್ಳಬೇಕು ಎಂದಿದ್ದು ಸರಿಯಲ್ಲ ಇನ್ನೂ ಮುಂದೆ ಈ ರೀತಿಯಾಗಿ ವಿವಾದಕ್ಕೆ ಎಡೆಮಾಡುವ ಹೇಳಿಕೆ ನೀಡಿದರೆ ಅದಕ್ಕೆ ತಕ್ಕ ಉತ್ತರವನ್ನು ನಾವು ಕೊಡುತ್ತೇವೆ. ಸ್ವರ್ಗದಲ್ಲಿರುವ ಗುರುಗಳ ಬಗ್ಗೆ ಮಾತನಾಡಿರುವುದು ಸರಿಯಲ್ಲ.
ನೀವು ಇರುವ ಕ್ಷೇತ್ರ ಯಾವುದು? ನೀವು ಮಾತನಾಡುವ ವಿಷಯ ಯಾವುದು? ನಿಮ್ಮನ್ನು ನಿಮ್ಮ ಮನೆಯಿಂದ ಒದ್ದು ಹೊರಗೆ ಹಾಕಬೇಕಿತ್ತು ನಿಮ್ಮ ಹೆಂಡತಿ. ನಿಮಗೆ ಇಷ್ಟು ವಯಸ್ಸಾಗಿದೆ ಏನು ಮಾತಾಡಬೇಕು ಯಾವ ರೀತಿ ಮಾತಾಡಬೇಕು ಅನ್ನೋ ಬುದ್ದಿ ಇಲ್ವಾ? ನೀವು ಹೇಳಿರುವ ಹೇಳಿಕೆ ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋ ಮೂರ್ಖರ ಹಾಗೆ ಇದೆ ನಿಮ್ಮ ಮನಸ್ಸು ಸಂಪೂರ್ಣವಾಗಿ ಕಸಗಳಿಂದ ಕೂಡಿಕೊಂಡು ಕಲ್ಮಶವಾಗಿದೆ ಎಂದು ಕಿಡಿಕಾರಿದರು.