ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ಒಂದು ದಿನದ ವಿದ್ಯುತ್ ನಿಲುಗಡೆ ಆಗಲಿದೆ.
ಇದನ್ನೂ ಓದಿ; ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ಇದನ್ನೂ ಓದಿ; ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ
ದಿನಾಂಕ: 01.07.2023 (ಶನಿವಾರ) ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆ ವರೆಗೆ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ, ಶೃಂಗೇರಿ ಇಲ್ಲಿ ಶಿಥಿಲಗೊಂಡ ಐ ಬೀಮ್ ರೈಲ್ ಪೋಲ್‌ಗಳನ್ನು ಕಳಚುವ ಕಾಮಗಾರಿ ಹಾಗೂ ಟವರ್ ನಿರ್ಮಾಣ ಕಾಮಗಾರಿ ಮತ್ತು ವಿದ್ಯುತ್ ಮಾರ್ಗಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶೃಂಗೇರಿ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಿಗಂದೂರು ಲಾಂಚ್ ಸ್ಥಗಿತಕ್ಕೆ ದಿನಗಣನೆ
- ಅನುಭವಕ್ಕೆ ಬಾರದ ಜ್ಞಾನ ವ್ಯರ್ಥ, ಆತ್ಮ ಜ್ಞಾನವೇ ವಿಜ್ಞಾನ- ವಿಶ್ವನಾಥ ಸುಂಕಸಾಳ
- ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ
ಇದನ್ನೂ ಓದಿ; 29 ಜೂನ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು: ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದ್ವಿ ಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರು ಶಾಕ್ ನೀಡಿದ್ದು, ಚಿಕ್ಕಮಗಳೂರು ನಗರದ ಗಲ್ಲಿ-ಗಲ್ಲಿಗಳಲ್ಲಿ ಹಾಫ್ ಹೆಲ್ಮೇಟ್ ಅನ್ನು ಸೀಜ್ ಮಾಡಿರುವ ಘಟನೆ ನಡೆದಿದೆ.
ಜನ ಅಪಘಾತದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಹಾಕೋದಕ್ಕಿಂತಲೂ ಹೆಚ್ಚಾಗಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುವವರೇ ಹೆಚ್ಚು. ಇಂತಹ ವಾಹನ ಸವಾರರಿಗೆ ಕಾಫಿನಾಡ ಪೊಲೀಸರು ಆರೋಗ್ಯ ಪಾಠ ಹೇಳಿದ್ದಾರೆ.
“500 ಫೈನ್ ಹಾಕ್ಬೇಕೋ, ತಿಳುವಳಿಕೆ ಹೇಳಿದ್ರೆ ಸಾಕೋ, ಇವತ್ ಫೈನ್ ಹಾಕಲ್ಲ, ಹಾಗೇ ಬಿಡ್ತೀನಿ” ಎಂದು ಬೈಕ್ ಸವಾರರಿಗೆ ಎಚ್ಚರಿಕೆ ನೀಡುತ್ತಾ ಹಾಫ್ ಹೆಲ್ಮೇಟ್ ಸೀಜ್ ಮಾಡಿ ಹೊಸ ಹೆಲ್ಮೆಟ್ ತೆಗೆದುಕೊಳ್ಳಬೇಕು. ತಲೆ, ಕಿವಿ, ಮುಖ ಕವರ್ ಆಗುವಂತಹಾ ಹೆಲ್ಮೇಟ್ ಹಾಕಬೇಕು ಎಂದು ಹಾಫ್ ಹೆಲ್ಮೇಟ್ ಬೈಕ್ ಸವಾರರಿಗೆ ಸೂಚನೆ ನೀಡಿದರು.
ಇನ್ನು ಕಳೆದ 2 ದಿನದಲ್ಲಿ ಸಾವಿರಾರು ಹೆಲ್ಮೇಟ್ ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.