Tuesday, November 28, 2023
Homeಇತರೆಪತಿಯೊಡನೆ ಹೋಗಲು ನಿರಾಕರಿಸಿದ ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದು ಹಿಂಸಿಸಿದ ಪೊಲೀಸರು, ವೀಡಿಯೋ ವೈರಲ್.

ಪತಿಯೊಡನೆ ಹೋಗಲು ನಿರಾಕರಿಸಿದ ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದು ಹಿಂಸಿಸಿದ ಪೊಲೀಸರು, ವೀಡಿಯೋ ವೈರಲ್.

ಚಿಕ್ಕಬಳ್ಳಾಪುರ: ಪತಿಯೊಂದಿಗೆ ಜಗಳ ಮಾಡಿಕೊಂಡು ಸಂಬಂಧಿಯೊಂದಿಗೆ ಪರಾರಿಯಾಗಿದ್ದ ಮಹಿಳೆಗೆ ಪೊಲೀಸರು ಠಾಣೆಯಲ್ಲಿ ಥಳಿಸಿ ಬೂಟುಗಾಲಿನಿಂದ ಒಡೆಯುತ್ತಿರುವ ವಿಡಿಯೋ ವೈರಲ್ ಆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ನಗರದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು ಮನಬಂದಂತೆ ಮಹಿಳೆಗೆ ಥಳಿಸಿರುವ ಗುಂಡಾವರ್ತನೆಗೆ ಜಿಲ್ಲೆಯದ್ಯಂತ ಜನರು ಆಕ್ರೋಶ ಹೊರಹಾಕಿದ್ದಾರೆ.

ಆ ಮಹಿಳೆ ಸ್ಥಳೀಯ ಇಟ್ಟಿಗೆ ಕಾರ್ಖಾನೆಯಲ್ಲಿ ಗಂಡನ ಜೊತೆ ಕೆಲಸ ಮಾಡುತ್ತಿದ್ದಳು. ಅವಳ ಗಂಡ ಪ್ರತಿದಿನ ರಾತ್ರಿ ಮನೆಗೆ ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ, ಹೊಡೆಯುತ್ತಿದ್ದ ಇದರಿಂದ ಬೇಸತ್ತು ಹೋಗಿದ್ದ ಮಹಿಳೆ ತನ್ನ ಸಂಬಂಧಿಕನೊಬ್ಬನೊಂದಿಗೆ ಓಡಿ ಹೋಗಿದ್ದಳು. ಇದರಿಂದ ಆಕೆಯ ಗಂಡ ಆತ ಕೆಲಸ ಮಾಡುತ್ತಿದ್ದ ಮಾಲೀಕ ಡಿ. ಜಿ. ರಾಮಚಂದ್ರರೊಂದಿಗೆ ಠಾಣೆಗೆ ಬಂದು ಮೌಖಿಕವಾಗಿ ದೂರನ್ನು ದಾಖಲಿಸಿದರು.

ದೂರು ದಾಖಲಿಸಿ ತನಿಖೆ ಶುರು ಮಾಡಿದ ಪೊಲೀಸರು ಆ ಮಹಿಳೆ ಮತ್ತು ಆಕೆ ಓಡಿ ಹೋಗಿದ್ದ ಸಂಬಂಧಿಯನ್ನು ಪತ್ತೆಹಚ್ಚಿ ಅವರನ್ನು ಠಾಣೆಗೆ ಕರೆತಂದಿದ್ದಾರೆ. ಕರೆತಂದು ಆಕೆಗೆ ಗಂಡನ ಜೊತೆ ಇರುವಂತೆ ಪೊಲೀಸರು ಹೇಳಿದ್ದಾರೆ ಅದಕ್ಕೆ ಒಪ್ಪದ ಮಹಿಳೆ ಗಂಡನ ಜೊತೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪ ಗೊಂಡ ಪೊಲೀಸರು ಆಕೆಗೆ ಚೆನ್ನಾಗಿ ಥಳಿಸಿ ಬೂಟುಕಾಲಿನಿಂದ ಒದ್ದಿದ್ದಾರೆ.

ಮಹಿಳಾ ಸಿಬ್ಬಂದಿ ಇಲ್ಲದ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಮನಬಂದಂತೆ ಪೊಲೀಸರು ಥಳಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದೆ.

ಈ ಠಾಣೆಯಲ್ಲಿ ಈ ಹಿಂದೆಯೂ ಇದೇ ರೀತಿಯ ಘಟನೆ ಜರುಗಿದ್ದು ಸುದ್ದಿಯಾಗಿತ್ತು. ಈ ಹಿಂದೆ ಕಳ್ಳತನ ಪ್ರಕರಣ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಠಾಣೆಗೆ ತೆರಳಿದ್ದ ಗ್ರಾಮಸ್ಥನನ್ನೇ ಮನಬಂದಂತೆ ಪೊಲೀಸರು ಥಳಿಸಿದ್ದರು. ಈಗಲೂ ಇದೆ ರೀತಿಯಲ್ಲಿ ಒಬ್ಬ ಮಹಿಳೆಗೆ ಥಳಿಸಿರುವುದು ಪೊಲೀಸ್ ಇಲಾಖೆಯ ಮೇಲಿದ್ದ ಗೌರವವನ್ನು ಹಾಳು ಮಾಡುವಂತೆ ಮಾಡಿದೆ.

Most Popular

Recent Comments