Sunday, June 4, 2023
Homeಕ್ರೈಂ ನ್ಯೂಸ್ಚಿಕ್ಕಮಗಳೂರು : ರಾತ್ರೋರಾತ್ರಿ ಬೈಕ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳನ ಬಂಧನ, 11 ಬೈಕ್ ವಶ.

ಚಿಕ್ಕಮಗಳೂರು : ರಾತ್ರೋರಾತ್ರಿ ಬೈಕ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳನ ಬಂಧನ, 11 ಬೈಕ್ ವಶ.

ರಾತ್ರೋರಾತ್ರಿ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಡೂರು ತಾಲ್ಲೂಕಿನ ಶೆಟ್ಟಿಹಳ್ಳಿಯ ಮೋಹನ್ ಎಂಬಾತ ಬಂಧಿತ ಆರೋಪಿಯಾಗಿದ್ದು

ಬಂಧಿತನಿಂದ ಸುಮಾರು 4 ಲಕ್ಷ ಮೌಲ್ಯದ ವಿವಿಧ ಕಂಪನಿಯ 11 ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ನಡೆದಿದ್ದ ಹಿನ್ನೆಲೆ ತನಿಖೆ ಕೈಗೊಂಡಿದ್ದ ಪೊಲೀಸರು ಜಾಡು ಹಿಡಿದು ಹೊರಟು ಆರೋಪಿಯನ್ನು ಬಂಧಿಸಿದ್ದಾರೆ

ಪೊಲೀಸ್ ತನಿಖೆ ವೇಳೆ ಬೆಂಗಳೂರು, ತುಮಕೂರು ಸೇರಿ ರಾಜ್ಯದ ವಿವಿದ ಜಿಲ್ಲೆಗಳಲ್ಲಿ 11 ಪ್ರಕರಣ ದಾಖಲಾಗಿರುವುದು ಬಯಲಾಗಿದೆ

ಈತನು ಒಂದೆಡೆ ಬೈಕ್ ಕಳ್ಳತನ ಮಾಡಿ ಬೇರೆಡೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು.

ಖಚಿತ ಮಾಹಿತಿ ಮೇರೆಗೆ ಕಡೂರು ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

Most Popular

Recent Comments