ನವದೆಹಲಿ : ದೇಶದ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು. ಹಾಗೂ ಆಗಸ್ಟ್ 14 ಅನ್ನು ‘ವಿಭಜನ್ ವಿಭಿಶಿಕಾ ಸ್ಮೃತಿ ದಿನ’ ಅಥವಾ ವಿಭಿಶಿಕಾ ಸ್ಮಾರಕ ದಿನ ಎಂದು ನೆನಪಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
‘ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದ್ವೇಷ ಮತ್ತು ಹಿಂಸೆಯಿAದಾಗಿ, ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊoಡರು ಮತ್ತು ಪ್ರಾಣಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14 ನ್ನು ‘ವಿಭಿಶಿಕಾ ಸ್ಮಾರಕ ದಿನ’ವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
‘ಈ ದಿನವು ತಾರತಮ್ಯ, ದ್ವೇಷ ಮತ್ತು ದುರುದ್ದೇಶದ ವಿಷವನ್ನು ತೊಡೆದುಹಾಕಲು ನಮಗೆ ಸ್ಫೂರ್ತಿ ನೀಡುವುದಲ್ಲದೆ, ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಂವೇದನೆಗಳನ್ನು ಬಲಪಡಿಸುತ್ತದೆ’ ಎಂದು ಮೋದಿಯವರು ಹೇಳಿದರು.