ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಬಣಕಲ್ ಮುಖ್ಯರಸ್ತೆಯಲ್ಲಿ ನಡೆದಿದೆ.
ಇದನ್ನೂ ಓದಿ; ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ಇದನ್ನೂ ಓದಿ; ಎರಡು ಬಸ್ ಮಧ್ಯೆ ಭೀಕರ ಅಪಘಾತ; ಇಬ್ಬರು ಸಾವು
ರಾಯಚೂರು ಜಿಲ್ಲೆಯ ತೋರಣದಿನ್ನಿಯ ನಾಗಪ್ಪ ಕ್ಯಾಂಪಿನ ಕೆ. ಮಂಜುನಾಥ್ (೩೭) ಮೃತವ್ಯಕ್ತಿ. ಗುರುವಾರ ತಡರಾತ್ರಿ ಮದ್ಯ ಸೇವಿಸಿ ಮುಖ್ಯರಸ್ತೆಯಲ್ಲಿ ತೂರಾಡುತ್ತಿದ್ದ ಮಂಜುನಾಥ್ ಅವರನ್ನು ಸ್ಥಳೀಯರು ರಸ್ತೆ ಬದಿಗೆ ಕೂರಿಸಿದ್ದರು. ಪೊಲೀಸರಿಗೂ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಮಂಜುನಾಥ್ ಅವರಿಗೆ ಸ್ಥಳದಿಂದ ಹೋಗುವಂತೆ ಸೂಚಿಸಿದ್ದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ವರುಣನ ಅಬ್ಬರ, ಸೇತುವೆ ಮುಳುಗಡೆ
- ಪ್ರೇಯಸಿ ಮೇಲೆ ಮಚ್ಚಿನಿಂದ ಹಲ್ಲೆ; ಕಲ್ಯಾಣಿಗೆ ಜಿಗಿದು ಪ್ರಾಣಬಿಟ್ಟ ಯುವಕ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
ಶುಕ್ರವಾರ ಬೆಳಿಗ್ಗಿನ ಜಾವ ವಾಹನ ಹರಿದು ಮಂಜುನಾಥ್ ಮೃತಪಟ್ಟಿದ್ದಾರೆ. ವ್ಯಕ್ತಿಯ ಬಳಿ ಇದ್ದ ಆಧಾರ್ ಕಾರ್ಡ್ ಮೂಲಕ ಗುರುತು ಪತ್ತೆ ಆಗಿದೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಕಚೇರಿ ಕಟ್ಟಡದ ಸೀಲಿಂಗ್ ನ ಸಿಮೆಂಟ್ ಬಿದ್ದು ಸಿಬ್ಬಂದಿಗೆ ತೀವ್ರ ಗಾಯ
ತೀರ್ಥಹಳ್ಳಿ: ಮಹಿಳಾ ಅಧಿಕಾರಿ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೇಲ್ಚಾವಣಿಯ ಸೀಲಿಂಗ್ ಸಿಮೆಂಟ್ ತಲೆಯ ಮೇಲೆ ಬಿದ್ದು ತೀವ್ರತರದ ಗಾಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ; ಎಸ್.ಎಸ್.ಎಲ್.ಸಿ ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ ಎಷ್ಟನೇ ಸ್ಥಾನ?
ತಾಲೂಕು ಕಚೇರಿಯ ಕಟ್ಟಡ ಸಂಪೂರ್ಣ ಅವ್ಯವಸ್ಥೆಯಲ್ಲಿದ್ದು ಅನೇಕ ಬಾರಿ ಮೇಲ್ಚಾವಣಿಯ ಸೀಲಿಂಗ್ ಸಿಮೆಂಟ್ ಗಳು ಕುಸಿದು ಬೀಳುತ್ತಿರುವುದರ ಬಗ್ಗೆ ವರದಿಯಾಗಿದ್ದರು ಸಂಬಂಧಪಟ್ಟ ಇಲಾಖೆಯ ಗಮನ ವಹಿಸಿರಲಿಲ್ಲ ಆದರೆ,
ಇಂದು ಸರ್ವೆ ಇಲಾಖೆಯ ಕಚೇರಿಯಲ್ಲಿ ಮಹಿಳಾ ಅಧಿಕಾರಿ ಒಬ್ಬರು ಕರ್ತವ್ಯ ಮಾಡುತ್ತಿರುವ ವೇಳೆ ಮೇಲ್ಚಾವಣಿಯ ಸೀಲಿಂಗ್ ಸಿಮೆಂಟ್ ತಲೆಯ ಮೇಲೆ ಬಿದ್ದು ತೀವ್ರತರದ ಗಾಯವಾಗಿದ್ದು ಅವರನ್ನು ಜಯಚಾಮ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ; ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ
ಇನ್ನು ಈ ಬಗ್ಗೆ ತಾಲೂಕು ಆಡಳಿತದ ಅಧಿಕಾರಿಗಳು ಗಮನ ವಹಿಸಬೇಕಿದೆ.