Sunday, October 1, 2023
Homeಮಲೆನಾಡುಚಿಕ್ಕಮಗಳೂರುಬಿಜೆಪಿ ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ: ಶಾಸಕ ಟಿ.ಡಿ.ರಾಜೇಗೌಡ ಕಿಡಿ

ಬಿಜೆಪಿ ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ: ಶಾಸಕ ಟಿ.ಡಿ.ರಾಜೇಗೌಡ ಕಿಡಿ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನಿಂದಾಗಿ ರಾಜ್ಯದಾದ್ಯಂತ ಕಳಪೆ ಕಾಮಗಾರಿಗಳು ನಡೆಯುತ್ತಿದ್ದು, ನನ್ನ ಅವಧಿಯಲ್ಲಾದ ಅಭಿವೃದ್ಧಿಯನ್ನೂ ಸಹಿಸಲಾಗದ ವ್ಯಕ್ತಿಗಳು ಮಂಜೂರಾದ ಕಾಮಗಾರಿಗಳನ್ನು ತಡೆ ಹಿಡಿಯುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಇದನ್ನು ಓದಿ: ಬಿಜೆಪಿ ಅಭ್ಯರ್ಥಿಯಾಗಿ ದೀಪಕ್ ದೊಡ್ಡಯ್ಯ ಕಣಕ್ಕೆ

ಮೇಗುಂದಾ ಹೋಬಳಿಗೆ 147 ಕೋಟಿ ಕಾಮಗಾರಿ ಪೂರ್ಣ:
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕನಾದ ದಿನದಿಂದಲೇ ಜನ ಸೇವೆಯನ್ನೇ ಮೂಲ ಮಂತ್ರವನ್ನಾಗಿಸಿ ಹೆಚ್ಚು ಯೋಜನೆಗಳನ್ನು ತರುವ ಮೂಲಕ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಗೆ 147 ಕೋಟಿ ರೂಗಳ ಗರಿಷ್ಠ ಕಾಮಗಾರಿಗಳನ್ನು ಮಾಡಿಸಿದ್ದು, ಕೆಲವು ಕೆಲಸ ಪೂರ್ಣಗೊಂಡಿದ್ದು, ಮತ್ತೆ ಕೆಲವು ಕೆಲಸ ಪ್ರಗತಿಯಲ್ಲಿದೆ. ಪ್ರಗತಿಯಲ್ಲಿರುವ ಕೆಲಸಗಳನ್ನು ಅಧಿಕಾರಿಗಳ ಮೇಲೆ ಒತ್ತಡ ತಂದು, ತಡೆ ಹಿಡಿಸುವ ಕೆಲಸವನ್ನು ಬಿಜೆಪಿ ಮುಖಂಡರುಗಳು ಮಾಡುತ್ತಿದ್ದಾರೆ. ಸೋಲುವ ಹತಾಶೆಯಲ್ಲಿ ಗ್ರಾಮಗಳ ರಸ್ತೆ ಕಾಮಗಾರಿ ತಡೆಹಿಡಿದು ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದು, ಇದಕ್ಕೆ ಆ ಭಾಗದ ಜನರೇ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ.

ದ್ವೇಶದ ರಾಜಕಾರಣ ಮಾಡದೆ ಪ್ರೀತಿಯಿದ ಜನರ ಮನಸ್ಸನ್ನು ಗೆದ್ದಿದ್ದೇನೆ:
ಮಕ್ಕಿಕೊಪ್ಪದಿಂದ ಬಸರಿಕಟ್ಟೆ, ಹೊರನಾಡು ರಸ್ತೆ ಅಭಿವೃದ್ಧಿ, ಪ್ರವಾಸೋಧ್ಯಮ, ಮೂಲ ಸೌಲಭ್ಯ, ವಿದ್ಯುತ್, ಕುಡಿಯುವ ನೀರು, ವಸತಿ, ನಿವೇಶನ ಹಂಚಿಕೆಯಂತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೂ, ಚುನಾವಣೆಯಲ್ಲಿ ಸೋಲುವ ಭಯದಿಂದ ಮಾಜಿ ಶಾಸಕರು ಮನ ಬಂದಂತೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶಾಸಕನಾಗಿ ದ್ವೇಶದ ರಾಜಕಾರಣ ಮಾಡದೆ ಪ್ರೀತಿಯಿದ ಜನರ ಮನಸ್ಸನ್ನು ಗೆದ್ದಿದ್ದು, ಬಹುತೇಕ ಮತದಾರರ ಒಲವು ಈ ಬಾರಿ ಕಾಂಗ್ರೆಸ್ ಪರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ ಪಿ ಕುಮಾರಸ್ವಾಮಿ

ಬಿಜೆಪಿ ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ:
ಹೋಬಳಿಯ ಅನೇಕ ಕಡೆಗಳಲ್ಲಿ ಇನ್ನೂ ಮೂಲ ಸೌಲಭ್ಯಗಳು ಅಗತ್ಯವಿರುವ ಬಗ್ಗೆ ಮಾಹಿತಿ ಪಡೆದಿದ್ದು, ನಕ್ಸಲ್ ಬಾಧಿತ ಎಡಗುಂದಕ್ಕೆ 42 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿದ್ದು, ಅಡಕೆ ಎಲೆಚುಕ್ಕಿ ರೋಗದಿಂದ ಕಂಗೆಟ್ಟ ರೈತರ ನೆರವಿಗಾಗಿ ಮುಖ್ಯಮಂತ್ರಿ, ವಿಜ್ಞಾನಿಗಳು ಹಾಗೂ ವಿಧಾನಸಭೆಯಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಆದರೆ ಆಳುವ ಬಿಜೆಪಿ ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲದ ಕಾರಣ ಸ್ಪಂದನೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ; ಪ್ರಪಾತಕ್ಕೆ ಬಿದ್ದ ಬೈಕ್ ; ಚಿಕ್ಕಮಗಳೂರು ಮೂಲದ ಯುವಕ ಸಾವು

ಈ ಸಂದರ್ಭದಲ್ಲಿ ಕುಕ್ಕುಡಿಗೆ ರವಿಂದ್ರ, ಡಿ ಬಿ ರಾಜೇಂದ್ರ, ಬಿ ಎಮ್ ಸುದೇವ್, ಪಣಿರಾಜ್ ಇದ್ದರೂ.

Most Popular

Recent Comments