ಮೈಸೂರು: ಪೇಜಾವರ ಶ್ರೀಗಳು ದಲಿತರ ಮನೆಗೋಗಿದ್ದರು ಅಲ್ಲಿ ಅವರು ಕೋಳಿಯನ್ನು, ಕುರಿ ರಕ್ತದ ಫ್ರೈ, ಲಿವರ್ ಫ್ರೈ ನೀಡಿದರೆ ಅದನ್ನು ಸೇವಿಸುತ್ತಿದ್ದರೇ? ಎಂದು ಸಂಗೀತ ನಿರ್ದೇಶಕ ಹಂಸಲೇಖ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಈ ಹಿಂದೆ ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಭೇಟಿಯನ್ನು ನೀಡಿದ್ದರು. ಅವರು ಅಲ್ಲಿ ಕುಳಿತಿದ್ದರು ಅಷ್ಟೆ, ಮನೆಯವರು ಮಾಂಸವನ್ನು ನೀಡಿದ್ದರೇ, ಕುರಿ ರಕ್ತದ ಫ್ರೈ, ಲಿವರ್ ಫ್ರೈ ನನ್ನು ಮಾಡಿಕೊಟ್ಟಿದ್ದರೇ ಅದನ್ನು ಸೇವಿಸುತ್ತಿದ್ದರೇ? ಎಂದು ಪ್ರಶ್ನೆಯನ್ನು ಮಾಡಿ, ದಲಿತ ಸಮುದಾಯದವರ ಮನೆಗೆ ಮೇಲ್ಜಾತಿಯವರು ಹೋದರೆ ಅಲ್ಲಿ ಅವರು ಮೇಲ್ಜಾತಿಯ ಜನರ ಹಾಗೆಯೇ ವರ್ತಿಸುತ್ತಾರೆ ಎಂದು ಹೇಳಿದ್ದರು ಹಾಗೆಯೇ ಬಿಳಿರಂಗಯ್ಯನ ಬಗ್ಗೆ ಮಾತನಾಡಿದ ಅವರು ಬಿಳಿರಂಗಯ್ಯ ಸೋಲಿಗರ ಮನೆಯ ಹೆಣ್ಣಿನ ಜೊತೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವೂ ಇಲ್ಲ, ಕತ್ತಲಾದಾಗ ಸೋಲಿಗರ ಮನೆಗೆ ಬಂದು ಹೆಣ್ಣು ಮಗಳ ಜೊತೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗಿ ಕೂರುವುದು ಅದೇನು ದೊಡ್ಡ ವಿಷಯ ಅಲ್ಲ ಅದೆಲ್ಲ ನಾಟಕ, ಬೂಟಾಟಿಕೆ ಎಂದು ಹೇಳಿದರು.
ಎಲ್ಲಾ ಸೌಕರ್ಯ ಉಳ್ಳವರು ದಲಿತರ ಮನೆಗೆ ಹೋಗುವುದು ದೊಡ್ಡ ಕಾರ್ಯವಾಗುವುದಿಲ್ಲ, ದಲಿತರನ್ನು ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಬೇಕು, ಕುಡಿಯಲು ನೀರು ಕೊಟ್ಟು ಆ ಲೋಟವನ್ನು ಅವರೇ ತೊಳೆಯಬೇಕು ಎಂದು ಹಂಸಲೇಖ ಹೇಳಿದರು.
ಹಂಸಲೇಖ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪರ, ವಿರೋಧ ಚರ್ಚೆ ನಡೆಯುತ್ತಿದ್ದು ನೆಟ್ಟಿಗರು ಹಂಸಲೇಖ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.