ರಾಮನಗರ: ನಗರ ಸಭೆಯ ಅಧಿಕಾರಿಗಳಿಂದಾಗಿ ನಗರದ ಮಹಾತ್ಮಾ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆ ನಡೆಸುವ ತಾಣವಾಗಿದೆ ಅದರೆಡೆಗೆ ಅಧಿಕಾರಿಗಳು ಗಮನವನ್ನು ಹರಿಸಬೇಕು ಎಂದು ಸಾರ್ವಜನಿಕರು ನಗರಸಭೆಗೆ ಒತ್ತಾಯ ಮಾಡಿದ್ದಾರೆ.
ನಗರದಲ್ಲಿರುವ ಗಾಂಧಿ ಪಾರ್ಕ್ ನಲ್ಲಿ ಕಾಲೇಜಿನ ಹುಡುಗ ಹುಡುಗಿಯರು ಕಾಲೇಜಿಗೆ ಬಂಕ್ ಹಾಕಿ ಈ ಪಾರ್ಕ್ ಗೆ ಬಂದು ಅಸಭ್ಯವಾಗಿ ವರ್ತನೆಯಿಂದ ನಡೆದುಕೊಳ್ಳುತ್ತಿರುತ್ತಾರೆ. ಕೆಟ್ಟದಾಗಿ ವರ್ತಿಸುತ್ತಿರುತ್ತಾರೆ.
ಪಾರ್ಕ್ ನಲ್ಲಿ ಗಿಡ ಗಂಟಿಗಳು ಹೇರಳವಾಗಿ ಬೆಳೆದು ಪೊದೆಗಳಾಗಿ ಮಾರ್ಪಡಾಗಿದೆ. ಇಲ್ಲಿ ಯಾವ ಪೊದೆಯ ಬಳಿ ಹೋದರು ಹುಡುಗ ಹುಡುಗಿಯರು ಅಸಭ್ಯ ವಾಗಿ ವರ್ತಿಸುತ್ತಿರುತ್ತಾರೆ. ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಮದ್ಯಾಹ್ನದ ಸಮಯದಲ್ಲಿ ಪಡ್ಡೆಗಳು, ಸಂಜೆಯಗುತ್ತಾ ಬಂದರೆ ಕುಡುಕರು ಕುಡಿದು ತೂರಾಡುತ್ತಿರುತ್ತಾರೆ. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಇಲ್ಲಿಗೆ ಬಂದು ಅನೈತಿಕ ಚಟುವಟಿಕೆಯಲ್ಲಿ ಮುಳುಗಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಮನಗರ ಕೋರ್ಟ್ ಮತ್ತು ತಾಲ್ಲೂಕು ಕಚೇರಿ ಯ ನಡುವೆ ಇರುವ ಈ ಪಾರ್ಕ್ ನಲ್ಲಿ ಅನೇಕ ಜನರು ವಿಶ್ರಾಂತಿ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದೂ ಅವರಿಗೂ ಸಹ ಮುಜುಗರ ಆಗುವ ಘಟನೆ ಎದುರಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಅಧಿಕಾರಿಗಳು ಗಮನವನ್ನು ಹರಿಸುತ್ತಿಲ್ಲ. ಅಧಿಕಾರಿಗಳು ಕೂಡಲೇ ಈ ಸ್ಥಳದಲ್ಲಿ ಅನೈತಿಕ ಘಟನೆ ಜರುಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.