Monday, December 11, 2023
Homeಇತರೆಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ : ಮೊಬೈಲ್, ಗಾಂಜಾ ವಸ್ತುಗಳು ಪತ್ತೆ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ : ಮೊಬೈಲ್, ಗಾಂಜಾ ವಸ್ತುಗಳು ಪತ್ತೆ

ಬೆಂಗಳೂರು: ಸಿಸಿಬಿ ಅಧಿಕಾರಿಗಳು ಇಂದು ಪರಪ್ಪನ ಅಗ್ರಹಾರಕ್ಕೆ ದಾಳಿಯನ್ನು ನಡೆಸಿ ಮೊಬೈಲ್ ಗಳು, ಅಪಾರ ಪ್ರಮಾಣದ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜೈಲಿನಲ್ಲಿ ಕುಳಿತುಕೊಂಡು ಅವ್ಯವಹಾರವನ್ನು ಅನೈತಿಕ ಚಟುವಟಿಕೆಯನ್ನು ಹಾಗೂ ಅಕ್ರಮ ವ್ಯವಹಾರವನ್ನು ನಡೆಸುತ್ತಿರುವ ಆರೋಪಿಗಳ ಮೇಲೆ ದೂರು ಬಂದ ಪ್ರಕರಣದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದರು.

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಅತಿಯಾಗಿ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಅನೇಕ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡೆ ಎಲ್ಲಾ ಅಕ್ರಮಚಟುವಟಿಕೆಯನ್ನು ನಡೆಸಲು ಜೈಲನ್ನು ಅಡ್ಡೆಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ. ಹಾಗೂ ವೈಭೋಗ ಜೀವನವನ್ನು ನಡೆಸುವ ತಾಣವನ್ನಾಗಿ ಮಾರ್ಪಡಿಸಿಕೊಂಡಿರುವುದು ಖಚಿತವಾಗಿದೆ.

ಖಚಿತ ದೂರು ಲಭಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ಏಕಾಏಕಿ ದಾಳಿಯನ್ನು ನಡೆಸಿ ಮೊಬೈಲ್ ಗಳು, ಗಾಂಜಾ ಹಾಗೂ ಇತರ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಡಿಸಿಪಿ ಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಸಿಸಿಬಿ ಅಧಿಕಾರಿಗಳು ಇಡೀ ಪರಪ್ಪನ ಅಗ್ರಹಾರ ಜೈಲನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Most Popular

Recent Comments