Tuesday, November 28, 2023
HomeUncategorizedಭಾರತದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಿದ್ಧತೆ : ತನಿಖೆಯ ವೇಳೆ ಬಾಯ್ಬಿಟ್ಟ ಪಾಕಿಸ್ತಾನದ ಉಗ್ರ

ಭಾರತದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಿದ್ಧತೆ : ತನಿಖೆಯ ವೇಳೆ ಬಾಯ್ಬಿಟ್ಟ ಪಾಕಿಸ್ತಾನದ ಉಗ್ರ

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್​ ಅಸ್ರಫ್​ ಒಂದು ದಶಕಕ್ಕೂ ಹಿಂದಿನಿಂದ ನಕಲಿ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದ ಹಾಗೂ ಗುರುತಿನ ದಾಖಲಾತಿಗಳನ್ನು ಪಡೆಯುವುದಕ್ಕೋಸ್ಕರ ಘಾಜಿಯಾಬಾದ್​ನಲ್ಲಿ ಒಬ್ಬ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದ ಎಂದು ವಿಶೇಷ ಘಟಕದ ಡಿಸಿಪಿ ಪ್ರಮೋದ್​ ಖುಷ್​ವಾಹ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.

ಒಂದು ದಶಕಕ್ಕೂ ಹಿಂದಿನಿಂದ ಭಾರತದಲ್ಲಿ ವಾಸಿಸುತ್ತಿರುವ ಅವನು ಹಲವು ನಕಲಿ ಐಡಿಗಳನ್ನು ಇಟ್ಟುಕೊಂಡಿದ್ದ. ಅವುಗಳಲ್ಲಿ ಒಂದು ಅಹ್ಮದ್​ ನೂರಿ ಎಂಬ ಹೆಸರಿನಲ್ಲಿದ್ದು ಭಾರತದ ಪಾಸ್​ಪೋರ್ಟ್​ ಕೂಡ ಪಡೆದು ಥೈಲೆಂಡ್​ ಮತ್ತು ಸೌದಿ ಅರೇಬಿಯಾಗೆ ಪ್ರಯಾಣಿಸಿದ್ದ ಎಂದು ತಿಳಿದುಬಂದಿದೆ. ದಾಖಲಾತಿಗಳಿಗಾಗಿ ಉತ್ತರಪ್ರದೇಶದ ಘಾಜಿಯಾಬಾದ್​ನ ಮಹಿಳೆಯನ್ನು ಮದುವೆಯಾಗಿ, ಬಿಹಾರದಲ್ಲಿ ಭಾರತೀಯನೆಂಬ ಗುರುತಿನ ಚೀಟಿಗಳನ್ನು ಪಡೆದಿದ್ದ ಎಂಬ ಮಾಹಿತಿ ಲಭಿಸಿದೆ.

ಪಾಕಿಸ್ತಾನದ ಐಎಸ್‌ಐನಿಂದ ತರಬೇತಿಯನ್ನು ಪಡೆದಿದ್ದ ಉಗ್ರ ಅಸ್ರಫ್​ ಬಾಂಗ್ಲಾದೇಶದ ಮೂಲಕ ಸಿಲಿಗುರಿ ಗಡಿಪ್ರದೇಶದಿಂದ ಭಾರತವನ್ನು ಪ್ರವೇಶಿಸಿದ್ದ. ನಸೀರ್​ ಎಂಬ ಕೋಡ್​ ನೇಮ್​ ಹೊಂದಿದ ಪಾಕಿಸ್ತಾನಿ ಏಜೆಂಟ್​ ಅವನಿಗೆ ಸೂಚನೆಗಳನ್ನು ಕೊಡುತ್ತಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿದ್ದ. ‘ಪೀರ್​ ಮೌಲಾನಾ’ ಎಂಬುದಾಗಿಯೂ ಅಸ್ರಫ್​ ವೇಷ ಬದಲಾಯಿಸಿಕೊಂಡು ಅಡ್ಡಾಡಿದ್ದಾನೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಸದ್ಯ ಸ್ಲೀಪರ್​ ಸೆಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಎಂದು ಡಿಸಿಪಿ ಖುಷ್​ವಾಹ ತಿಳಿಸಿದ್ದಾರೆ

Most Popular

Recent Comments