ನವದೆಹಲಿ: ಭಾರತದೊಳಗೆ ಸುಮಾರು 200 ಪಾಕಿಸ್ತಾನ ಭಯೋತ್ಪಾದಕರು ನುಸುಳಲು ಅಲ್ಲಿಯ ಗುಪ್ತಚರ ಸಂಸ್ಥೆ ಸಹಾಯ ಮಾಡುತ್ತಿರುವುದಾಗಿ ಬಂಧಿತ ಪಾಕಿಸ್ತಾನದ ಉಗ್ರ ಮಾಹಿತಿಯನ್ನು ನೀಡಿದ್ದಾನೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಭಾರತಕ್ಕೆ ನುಸುಳಲು ಸಹಾಯ ಮಾಡುತ್ತಿರುವ ಕುರಿತು ಭಾರತದಲ್ಲಿ ಬಂಧಿತನಾಗಿರುವ ಅಲಿ ಬಾಬರ್ (19 ) ಮಾಹಿತಿಯನ್ನು ನೀಡಿದ್ದಾನೆ.
ಡಿಸೆಂಬರ್ ನಲ್ಲಿ ಹಿಮ ಹೆಚ್ಚಾಗಿ ಸುರಿಯುವುದರಿಂದ ಅದರ ಒಳಗೆ ಜಮ್ಮು ಮತ್ತು ಕಾಶ್ಮೀರ ಮೂಲಕ ಒಳ ನುಸುಳಲು ಸಂಚನ್ನು ರೂಪಿಸಿಕೊಂಡು ಪಾಕಿಸ್ತಾನ ಅಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಅನೇಕ ಅಡಗುತಾಣಗಳಲ್ಲಿ ಕಾದು ಕುಳಿತ್ತಿದ್ದು ಅವರು ಭಾರತದ ಒಳಗೆ ನುಸುಳಿ ರಕ್ತದ ಹೊಳೆಯನ್ನು ಹರಿಸಲು ಪಾಕಿಸ್ತಾನದ ಗುಪ್ತಚರ ಇಲಾಖೆಯು ಸಹ ಸಹಕರಿಸುತ್ತಿದೆ. ಭಾರತದ ಒಳಗೆ ನುಸುಳಲು ಒಟ್ಟು 8 ಹೊಸ ಮಾರ್ಗಗಳನ್ನು ಗುಪ್ತಚರ ಇಲಾಖೆ ತಿಳಿದುಕೊಂಡಿದ್ದು ಅದರ ಮುಖಾಂತರ ಒಳಗೆ ಉಗ್ರರು ನುಸುಳುತ್ತವೆ ಎಂದು ರಾಷ್ಟೀಯ ತನಿಖಾ ದಳದ ಮುಂದೆ ಬಾಬರ್ ಹೇಳಿದ್ದಾನೆ.
ಈ ಹಿಂದೆ ಸೆಪ್ಟೆಂಬರ್ 18 ರಂದು 5 ಜನ ಉಗ್ರರೊಂದಿಗೆ ಜಮ್ಮು ಕಾಶ್ಮೀರದೊಳಗೆ ನುಸುಳಿದ ಸಂದರ್ಭದಲ್ಲಿ ಭಾರತ ನಡೆಸಿದ ಉರಿವಲಯದ ಕಾರ್ಯಾಚರಣೆಯಲ್ಲಿ ಸೆಪ್ಟೆಂಬರ್ 26 ರಂದು ಬಾಬರ್ ನನ್ನು ಬಂಧಿಸಲಾಗಿತ್ತು.
ತನಿಖೆ ನಡೆಸುವ ವೇಳೆ ಬಾಬರ್ ಹೇಳಿದ ಮಾಹಿತಿಯನ್ನು ಆಧರಿಸಿ ಭಾರತದ ಗಡಿ ನಿಯಂತ್ರಣ ರೇಖೆಯ ಸಮೀಪ ಭದ್ರತಾ ಪಡೆ ಗಸ್ತು ತಿರುಗುವುದನ್ನು ಹೆಚ್ಚಿಸಿದೆ. ಹಾಗೂ CRPF, ಕೇಂದ್ರದ ಗುಪ್ತಚರ ಸಂಸ್ಥೆಗಳು, ಜಮ್ಮು & ಕಾಶ್ಮೀರ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆಯ ಪಡೆಗಳು, ಭಿಂಬೆರ್ ಗಡಿಯಲ್ಲಿ ಹದ್ದಿನ ಕಣ್ಣನ್ನು ಇಟ್ಟು ಗಸ್ತು ತಿರುಗುತ್ತಿದ್ದಾರೆ ಎಂದು ಇಲಾಖೆ ಮಾಹಿತಿಯನ್ನು ನೀಡಿದೆ.