Saturday, June 10, 2023
Homeಇತರೆತನ್ನ ಇಚ್ಛೆಗೆ ವಿರುದ್ಧ ಮದುವೆಯಾಗಿದ್ದ ಹೆಣ್ಣುಮಕ್ಕಳ ಕುಟುಂಬಕ್ಕೆ ಬೆಂಕಿಯಿಟ್ಟ ತಂದೆ, 7 ಮಂದಿ ಸಜೀವ ದಹನ

ತನ್ನ ಇಚ್ಛೆಗೆ ವಿರುದ್ಧ ಮದುವೆಯಾಗಿದ್ದ ಹೆಣ್ಣುಮಕ್ಕಳ ಕುಟುಂಬಕ್ಕೆ ಬೆಂಕಿಯಿಟ್ಟ ತಂದೆ, 7 ಮಂದಿ ಸಜೀವ ದಹನ

ಒಬ್ಬ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿಯನ್ನು ಹಚ್ಚಿದ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ

ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದಾರೆ.

ಮಂಜೂರ್ ಹುಸೇನ್​ ಬೆಂಕಿ ಹಚ್ಚಿದ ಈ ಮನೆಯಲ್ಲಿ ಆತನ ಇಬ್ಬರು ಮಕ್ಕಳಾದ ಫೌಜಿಯಾ ಬೀಬಿ ಹಾಗೂ ಖುರ್ಷಿದ್​​ ಮೇ ಕುಟುಂಬ ವಾಸವಿತ್ತು. ಈ ದುರ್ಘಟನೆಯಲ್ಲಿ ಫೌಜಿಯಾ ಬೀಬಿ, ಖುರ್ಷಿದ್​, ಬೀಬಿಯ ನಾಲ್ಕು ತಿಂಗಳ ಪುತ್ರ, ಖುರ್ಷಿದ್​​ ಮೂರು ಮಕ್ಕಳು ಹಾಗೂ ಅವರ ಪತಿ ಬೆಂಕಿಗೆ ಆಹುತಿಯಾಗಿದ್ದಾರೆ.

ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ನಡೆಯುವ ವೇಳೆ ಫೌಜಿಯಾ ಪತಿ ಮೆಹಬೂಬ್​ ಅಹಮದ್​ ಮನೆಯಿಂದ ಹೊರಗಡೆ ಇದ್ದರು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಅಹಮದ್​ ಹಾಗೂ ಫೌಜಿಯಾ 18 ತಿಂಗಳ ಹಿಂದೆ ವಿವಾಹವಾಗಿದ್ದರು. ಈ ಮದುವೆಗೆ ಮಂಜೂರ್ ಹುಸೇನ್​ ವಿರೋಧವಿತ್ತು. ಇದೇ ಕಾರಣಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಹುಸೇನ್​​ ಈ ಕೃತ್ಯ ಎಸಗಿದ್ದಾನೆ. ಈ ಪ್ರಕರಣದ ಸಂಬಂಧ ಮೆಹಬೂಬ್​ ಅಹಮದ್ ಮಂಜೂರ್​​ ಹುಸೇನ್​ ಹಾಗೂ ಬಾವ ಸಬೀರ್​ ಹುಸೇನ್​ ವಿರುದ್ಧ​ ದೂರು ದಾಖಲಿಸಿದ್ದಾರೆ.

Most Popular

Recent Comments