Monday, December 11, 2023
Homeಇತರೆಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ರಾಜಸ್ಥಾನದ ಶಿಕ್ಷಕಿ ಅಮಾನತು.

ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ರಾಜಸ್ಥಾನದ ಶಿಕ್ಷಕಿ ಅಮಾನತು.

ಉದಯಪುರ: ಐಸಿಸಿ ಟಿ 20 ವಿಶ್ವಕಪ್ ನ ಮೊದಲ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವನ್ನು ಕಂಡಿತ್ತು, ಪಾಕಿಸ್ತಾನ ಗೆಲುವನ್ನು ಕಂಡಿದ್ದರಿಂದ ಸಂಭ್ರಮಿಸಿದ ರಾಜಸ್ಥಾನದ ಶಿಕ್ಷಕಿಯೊಬ್ಬರನ್ನು ಅವರ ಕೆಲಸದಿಂದ ಅಮಾನತುಗೊಳಿಸಿದ ಘಟನೆ ಉದಯಪುರದಲ್ಲಿ ನಡೆದಿದೆ.

ಉದಯಪುರದಲ್ಲಿರುವ ನೀರ್ಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಎಂಬವವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವನ್ನು ಕಂಡು ಸಂತಸಗೊಂಡ ಇವರು ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಪಾಕ್ ತಂಡದ ಚಿತ್ರವನ್ನು ಹಾಕಿ ‘ನಾವು ಗೆದ್ದೆವು’ ಎಂದು ಬರೆದುಕೊಂಡಿದ್ದರು.

ಇದನ್ನು ಗಮನಿಸಿದ ಶಾಲೆಯ ವಿದ್ಯಾರ್ಥಿಯ ಪೋಷಕರೊಬ್ಬರು ಆಕೆಗೆ ನೀವು ಪಾಕಿಸ್ತಾನಕ್ಕೆ ಬೆಂಬಲವನ್ನು ನೀಡುತ್ತಿದ್ದೀರಾ ಎಂದು ಕೇಳಿದಾಗ ನಫೀಸಾ ‘ಹೌದು’ ಎಂದು ಉತ್ತರಿಸಿದ್ದರು.

ಆಕೆ ಹಾಕಿದ್ದ ವ್ಯಾಟ್ಸಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ವೈರಲ್ ಆದ ಬಳಿಕ ವಿರೋಧ ವ್ಯಕ್ತ ಪಡಿಸಿದ ಜನರು ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಲು ಒತ್ತಾಯ ಮಾಡಿದರು ಆದ್ದರಿಂದ ಶಾಲಾ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.

Most Popular

Recent Comments