Saturday, September 30, 2023
Homeಇತರೆಪತ್ನಿಯ ಅಂತ್ಯಸಂಸ್ಕಾರ ನಡೆಯುವ ವೇಳೆ ಭಾರವಾದ ಮನಸ್ಸಿನಿಂದಲೇ "ಪದ್ಮಶ್ರೀ ಪ್ರಶಸ್ತಿ" ಯನ್ನು ಸ್ವೀಕರಿಸಿದ ಬಾಲನ್ ಪುಥೇರಿ.

ಪತ್ನಿಯ ಅಂತ್ಯಸಂಸ್ಕಾರ ನಡೆಯುವ ವೇಳೆ ಭಾರವಾದ ಮನಸ್ಸಿನಿಂದಲೇ “ಪದ್ಮಶ್ರೀ ಪ್ರಶಸ್ತಿ” ಯನ್ನು ಸ್ವೀಕರಿಸಿದ ಬಾಲನ್ ಪುಥೇರಿ.

ನವದೆಹಲಿ: ಪತ್ನಿ ಕ್ಯಾನ್ಸರ್ ನಿಂದ ಸಾವಿಗೀಡಾದ ವೇಳೆಯಲ್ಲಿ ಭಾರವಾದ ಮನಸ್ಸಿಂದಲೇ ಲೇಖಕ ಬಾಲನ್ ಪುಥೇರಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬಾಲನ್ ಪುಥೇರಿ ಮತ್ತು ಪತ್ನಿ ಶಾಂತ ಮೂಲತಃ ಕೇರಳದ ಮಲಪ್ಪುರಂ ನ ಕೊಂಡೊಟ್ಟಿಯವರು.

ಬಾಲನ್ ರವರು ಸುಮಾರು 200ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಬಾಲನ್ ನವರಿಗೆ ಕಣ್ಣಿನ ದೃಷ್ಟಿ ಸರಿಯಿಲ್ಲದ ಕಾರಣ ಅವರ ಹೆಂಡತಿ ಶಾಂತ ಬಾಲನ್ ಅವರ ಬೆನ್ನೆಲುಬಾಗಿ ನಿಂತು ಅವರಿಗೆ ಸಹಾಯ ಮಾಡುತ್ತಿದ್ದರು. ಅವರು ಮಾಡಿದ ಸಹಾಯದಿಂದ ಬಾಲನ್ ನೂರಾರು ಪುಸ್ತಕಗಳನ್ನು ಬರೆದಿದ್ದರು.

ತಾನು ನೂರಾರು ಪುಸ್ತಕಗಳನ್ನು ಬರೆಯಲು ತನ್ನ ಹೆಂಡತಿಯು ಸಹಾಯ ಮಾಡಿದ್ದರಿಂದ ತನ್ನ ಹೆಂಡತಿಯ ಜೊತೆಯಲ್ಲಿಯೇ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಕನಸನ್ನು ಹೊಂದಿದ್ದ ಬಾಲನ್ ತನ್ನ ಹೆಂಡತಿ ಕ್ಯಾನ್ಸರ್ ನಿಂದ ಮರಣ ಹೊಂದಿದ ವೇಳೆಯಲ್ಲಿ ಭಾರವಾದ ಮನಸ್ಸಿಂದಲೇ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬಾಲನ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ಕೊಂಡೊಟ್ಟಿಯಲ್ಲಿ ಬಾಲನ್ ನ ಕುಟುಂಬಸ್ಥರು ಅವರ ಪತ್ನಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಕೇರಳದ ಖ್ಯಾತ ಲೇಖಕ ಬಾಲನ್ ಪುಥೇರಿಯವರು ಒಂದೇ ಸಮಯದಲ್ಲಿ ಸುಖ – ದುಃಖ ಎರಡನ್ನೂ ಅನುಭವಿಸಿದರು. ಒಂದು ಕಡೆ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಖುಷಿ ಹಾಗೂ ಇನ್ನೊಂದೆಡೆ ಹೆಂಡತಿಯನ್ನು ಅಗಲಿದ ದುಃಖ ಬಾಲನ್ ಅವರಿಗೆ ಎದುರಾಗಿತ್ತು.

Most Popular

Recent Comments