Sunday, October 1, 2023
Homeಮಲೆನಾಡುಚಿಕ್ಕಮಗಳೂರುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟಿತ ಹೋರಾಟಕ್ಕೆ ಬೆಲೆ ಇದೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟಿತ ಹೋರಾಟಕ್ಕೆ ಬೆಲೆ ಇದೆ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪ್ರಾಮಾಣಿಕ ಹೋರಾಟಕ್ಕೆ ಬೆಲೆ ಇದೆ ಎಂಬುದಕ್ಕೆ ಹಾಡುಗಾರು ರಸ್ತೆ ಮತ್ತು ಮೂಲ ಸೌಲಬ್ಯ ಹೋರಾಟ ಸಮಿತಿಯ ಹೋರಾಟವೇ ಸಾಕ್ಷಿಯಾಗಿದ್ದು. ಅಪಪ್ರಚಾರದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದ ಕೆಲವು ಕುತಂತ್ರಿ ರಾಜಕಾರಣಿಗಳ ಪ್ರಯತ್ನ ವಿಫಲವಾಗಿದೆ ಎಂದು ಹಾಡುಗಾರು ರಸ್ತೆ ಮತ್ತು ಮೂಲ ಸೌಲಬ್ಯ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಹೇರೂರು ಗ್ರಾ ಪಂ ವ್ಯಾಪ್ತಿಯ ಹಾಡುಗಾರಿನಲ್ಲಿ ಸೋಮವಾರ ಹೋರಾಟ ಸಮಿತಿ ನಡೆಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಪ್ರಮುಖ ಸಮಸ್ಯೆಗಳ ಈಡೇರಿಕೆಯ ಬೇಡಿಕೆಯೊಂದಿಗೆ ಆರಂಭಿಸಿದ ಹೋರಾಟದಿಂದಾಗಿ, ಹಲವು ವರ್ಷಗಳಿಂದ ದುರಸ್ಥಿ ಕಾಣದ ಗ್ರಾಮ ಸಂಪರ್ಕದ ಮೂರು ರಸ್ತೆಗಳು ಹಾಗೂ ಮುಖ್ಯ ಸೇತುವೆಯೊಂದರ ನಿರ್ಮಾಣವಾಗಿದೆ. ಹೋರಾಟದಲ್ಲಿ ಪಾಲ್ಘೊಂಡ ಸಮಿತಿಯ ಸದಸ್ಯರು ತಮ್ಮೆಲ್ಲರ ರಾಜಕೀಯ ಪಕ್ಷಗಳ ಜವಾಬ್ದಾರಿಗಳಿಗೆ ರಾಜಿನಾಮೆ ನೀಡಿದ್ದಲ್ಲದೆ, ಕಳೆದ ನಾಲ್ಕು ತಿಂಗಳಿನಿಂದ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಲ್ಲಿ ಭಾಗಿಯಾಗದೆ ಹಾಗೂ ಗ್ರಾಮದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸಲು ಅವಕಾಶ ನೀಡದೆ
ಮುಂದಿನ ಚುನಾವಣಾ ಬಹಿಷ್ಕಾರ ನಿಲುವು ಪ್ರದರ್ಷಿಸಿದ ಕಾರಣ ಆಳುವವರು ಹಾಗೂ ಅಧಿಕಾರಿಗಳು ನಿರ್ಲಕ್ಷಿತ ಗ್ರಾಮಕ್ಕೆ ಅಗತ್ಯ ಕಾಮಗಾರಿಗಳನ್ನು ಮಾಡಿಕೊಟ್ಟಿದ್ದಾರೆ. ಇದು ಚುನಾವಣಾ ಭಹಿಷ್ಕಾರ ಮಾಡಿ ಚುನಾವಣೆಗೂ ಮುನ್ನವೇ ತನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಂಡ ಅಪರೂಪದ ಹೋರಾಟವಾಗಿದ್ದು, ಸಂಘಟಿತ ಹೋರಾಟಕ್ಕೆ ಯಾವಾಗಲೂ ಬೆಲೆ ಇದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ; ಕಡೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ

ಆರ್ ಎಸ್ ಎಸ್ ನ ಕಾರ್ಯಕರ್ತನಾದ ನಾನು ಸಂಘದ ಆಶಯದಂತೆ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ದಿಗಾಗಿ ಹೋರಾಟದಲ್ಲಿ ಪಾಲ್ಘೊಂಡಿದ್ದು, ಇದನ್ನು ಸಹಿಸದ ಜಿಲ್ಲಾ ಉಪಾಧ್ಯಕ್ಷ ಮಹಾಬಲರಾವ್ ಸೇರಿದಂತೆ ಕೆಲವು ಬಿಜೆಪಿಗರು ನಾನು ಪ್ರತಿಭಟನೆಗಾಗಿ ಕಾಂಗ್ರೇಸ್ ನವರಿಂದ ಹಣ ಪಡೆದಿದ್ದೇನೆ ಎಂಬ ಅಪಪ್ರಚಾರ ಮಾಡಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೀಳು ಮಟ್ಟದ ಪ್ರಯತ್ನ ಮಾಡಿದ್ದಾರೆ. ಬಿಜೆಪಿಗರ ಈ ನಿಲುವು ಖಂಡನೀಯವಾಗಿದ್ದು, ಅವರು ನನ್ನ ಮೇಲೆ ಮಾಡುತ್ತಿರುವ ಅಪಪ್ರಚಾರ ಸತ್ಯಕ್ಕೆ ದೂರವಾಗಿದೆ. ಈ ರೀತಿ ಆರೋಪಮಾಡುವವರು ಈ ಬಗ್ಗೆ ಪ್ರಮಾಣ ಮಾಡಲು ಎಪ್ರಿಲ್ 21 ರ ಶುಕ್ರವಾರ ಸೀಗೋಡಿನ ಶ್ರೀ ಬಬ್ಬುಸ್ವಾಮಿ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ದೇವರು, ದೈವಗಳಲ್ಲಿ ಶೃದ್ಧೆ ಹಾಗೂ ನಂಬಿಕೆ ಹೊಂದಿರುವ ಸಮಿತಿ, ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸುವಂತೆ ಈಗಾಗಲೇ ಗ್ರಾಮದ ದೇವರು ಹಾಗೂ ದೈವಗಳಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ನಂತರ ಹೋರಾಟ ಸಮಿತಿಯ ಅದ್ಯಕ್ಷ ವೆಂಕಟರಮಣ ಭಟ್ ಮಾತನಾಡಿ, ನಮ್ಮ ಹೋರಾಟವನ್ನು ಹತ್ತಿಕ್ಕುವ ಹಾಗೂ ಆಗುತ್ತಿದ್ದ ಅಭಿವೃದ್ದಿಯನ್ನು ತಡೆಯುವ ಎಲ್ಲಾ ಕೆಲಸಗಳು ಹಾಗೂ ವೈಯಕ್ತಿಕ ಅಪಪ್ರಚಾರಗಳು ನಡೆದಾಗಲೂ, ಹೋರಾಟದಲ್ಲಿ ನಮ್ಮೂಂದಿಗೆ ಪ್ರಮಾಣಿಕವಾಗಿ ಎದೆಗುಂದದೆ ನಿಂತ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಹಾಗೂ ಗ್ರಾಮದ ಎಲ್ಲರ ನಿಲುವು ಅಭಿನಂದನೀಯ. ಹಾಗೂ ನಮ್ಮ
ಮನವಿಗೆ ಸ್ಪಂದಿಸಿ ಕೆಲಸಗಳನ್ನು ಮಾಡಿಕೊಟ್ಟ ಶಾಸಕ ರಾಜೇಗೌಡರಿಗೂ, ಇಲ್ಲಿನ ಸಮಸ್ಯೆಯ ಕುರಿತು ಸರಕಾರದ ಗಮನ ಸೆಳೆದ ಮಾದ್ಯಮ ಮಿತ್ರರಿಗೂ ವಿಶೇಷ ಸಹಕಾರ ನೀಡಿದ ಅಪರ ಜಿಲ್ಲಾಧಿಕಾರಿಗಳಾದ ರೂಪ, ತಹಸೀಲ್ದಾರ್ ವಿಮಲ ಸುಪ್ರಿಯ, ಇಒ ಹರೀಷ್, ಪಿಡಿಒ ಮಹೇಶ್ ಸೇರಿದಂತೆ ಎಲ್ಲರಿಗೂ ವಿಶೇಷ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಹಾಗೂ ನಮ್ಮ ಚುನಾವಣಾ ಭಹಿಷ್ಕಾರದ ನಿಲುವನ್ನು ಹಿಂಪಡೆದಿದ್ದೇವೆ ಎಂದರು.

ಇದನ್ನೂ ಓದಿ; ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ

ನಂತರ ಹೂವಪ್ಪಗೌಡ ಮಾತನಾಡಿ, ಗ್ರಾಮದ ಅಭಿವೃದ್ಧಿಯ ಕಾರಣದಿಂದ ಪಕ್ಷಾತೀತ ಹೋರಾಟ ನಡೆಸಿದ್ದೇವೆ. ಆದರೆ ಕೆಲವರು ಇದರಲ್ಲಿ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ. ಅಪಪ್ರಚಾರ ಮಾಡಿ ಹೋರಾಟವನ್ನು ದಿಕ್ಕು ತಪ್ಪಿಸುವಲ್ಲಿ ವಿಫಲರಾಗಿ ಕೊನೆಗೆ, ಶಾಸಕ ರಾಜೇಗೌಡರ ಅನುದಾನದಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ನಿಲ್ಲಿಸುವ ಕೆಲಸ ಮಾಡಿದ್ದರು. ಗ್ರಾಮದ ಜನರ ಸಂಘಟಿತ ಪ್ರಯತ್ನದಿಂದ ಇಂದು ಕೆಲಸಗಳಾಗಿದೆ. ನಾವು ಅಭಿವೃದ್ಧಿ ಮಾಡುವುದಿಲ್ಲ ಬೇರೆಯವರು ಮಾಡಲು ಬಿಡುವುದಿಲ್ಲ ಎಂಬ ಮನಸ್ಥಿತಿ ಒಳ್ಳೆಯದಲ್ಲ ಎಂದರು.

ಪತ್ರಿಕಾ ಘೋಷ್ಟಿಯಲ್ಲಿ ಹೋರಾಟ ಸಮಿತಿಯ ಗೌರವಾದ್ಯಕ್ಷ ರಂಗಪ್ಪಗೌಡ, ಉಪಾದ್ಯಕ್ಷ ಚಂದ್ರಗಿರಿ ದಿನೇಶ್, ಖಜಾಂಚಿ ಲಕ್ಷ್ಮೀನಾರಾಯಣ ಭಟ್, ಬಿಜೆಪಿ ಬೂತ್ ಸಮಿತಿ ಅದ್ಯಕ್ಷ ಮಹೇಶ್, ಕಾಂಗ್ರೇಸ್ ಬೂತ್ ಸಮಿತಿ ಅದ್ಯಕ್ಷ ಹೂವಪ್ಪಗೌಡ ಇದ್ದರು.

Most Popular

Recent Comments