News Malnad Special: ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಘೋಷಿಸಿದ 5 ಪ್ರಮುಖ ಗ್ಯಾರೆಂಟಿಗಳು ಈಗ ಕಾಂಗ್ರೆಸ್ ಗೆ ನುಂಗಲಾರದ ತುತ್ತಾದಂತೆ ಕಾಣುತ್ತಿದೆ. ಸರ್ಕಾರ ರಚನೆಯಾಗಿ ಸಚಿವ ಸಂಪುಟ ಫೈನಲ್ ಆಗಿದ್ದರೂ ಕಾಂಗ್ರೆಸ್ ನಿಂದ ಈವರೆಗೂ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕಾಂಗ್ರೆಸ್ ಗ್ಯಾರೆಂಟಿ ಕುರಿತಂತೆ ರಾಜ್ಯದೆಲ್ಲೆಡೆ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಮಲೆನಾಡಿನ ಜನರ ಅಭಿಪ್ರಾಯಗಳು ಏನಿವೆ ಎನ್ನುವುದರ ಕುರಿತು ನ್ಯೂಸ್ ಮಲ್ನಾಡ್ ಜನರ ಬಳಿ ಕೇಳಿತ್ತು.. ಇದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ದೊರತಿದ್ದು ಮಲೆನಾಡಿಗರು ಗ್ಯಾರೆಂಟಿ ಬಗ್ಗೆ ಏನ್ ಹೇಳಿದ್ದಾರೆ ಓದಿ..
1) ಮೊದಲನೆಯದಾಗಿ 3 ಸಾವಿರ ಕೊಡುವುದರ ಬದಲು ಅವರಿಗೆ ಉದ್ಯೋಗ ಸೃಷ್ಟಿ ಮಾಡಲಿ. 10 ಕೆಜಿ ಅಕ್ಕಿ ಕೊಡುವುದರ ಬದಲು ಅದನ್ನು ಬೆಳೆಯುವ ರೈತನಿಗೆ ಪ್ರೋತ್ಸಾಹ ನೀಡಲಿ. ಮಹಿಳೆಗೆ 2 ಸಾವಿರ ಕೊಡುವ ಬದಲು ಅವರಿಗೆ ಬದುಕು ಕಟ್ಟಿಕೊಡುವಂತ ಅವಕಾಶ ಸೃಷ್ಟಿ ಮಾಡಲಿ. ಸರ್ಕಾರ ಇರುವುದು ಕೇವಲ 5 ವರ್ಷ ಆದರೆ ಬದುಕುವುದು ಯೋಚನೆ ಮಾಡಬೇಕಲ್ಲವೇ? – ಸಂದೀಪ್, ಹರಿಹರಪುರ, ಕೊಪ್ಪ ತಾಲ್ಲೂಕು
2) ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಐದು ಗ್ಯಾರೆಂಟಿಗಳು ಹೊಸ ಯೋಜನೆಗಳಾದ ಕಾರಣ ಯೋಜನೆಯ ಅನುಷ್ಠಾನಕ್ಕೆ ಹಲವು ಆಯಾಮಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ.
ಆದ್ದರಿಂದ ಯೋಜನೆಯ ಜಾರಿಯ ಬಗ್ಗೆ ಆಯಾ ಇಲಾಖೆಯ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಮತ್ತು ಪರಿಣಿತರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಅತಿ ಅಗತ್ಯ. ಆತುರದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಿ ಮುಂದೆ ಹಲವು ಸಮಸ್ಯೆಗಳನ್ನು ಎದುರಿಸುವ ಬದಲು ನಿಧಾನವಾಗಿ ಸೂಕ್ತವಾದ ರುಪುರೇಶೆಗಳನ್ನು ಸಿದ್ಧಪಡಿಸಿ ವ್ಯವಸ್ಥಿತವಾಗಿ ಈ ಯೋಜನೆಗಳನ್ನು ಜಾರಿಗೊಳಿಸಬೇಕಾಗಿರುವುದರಿಂದ ಕನಿಷ್ಠ ಸಮಯ ಬೇಕಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ಆತುರ ಪಡುವ ಅಗತ್ಯವಿಲ್ಲ. ಸ್ವಲ್ಪ ಸಂಯಮದಿಂದ ಸರ್ಕಾರಕ್ಕೆ ಸಮಯ ನೀಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಭಾವಿಸಿದ್ದೇನೆ. – ರತನ್ ಗೌಡ ಅರಗಿ, ನರಸಿಂಹರಾಜಪುರ ತಾಲೂಕ್
3) ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳು ಒಂದು ರೀತಿ ಅಧಿಕಾರ ಹಿಡಿಯಲು ಉಪಯೋಗ ಮಾಡಿದ ಆಮಿಷದ ಯೋಜನೆಗಳು ಎನ್ನಬಹುದು. ಉಚಿತ ಖಚಿತಗಳ ನಡುವೆ ನಮ್ಮ ರಾಜ್ಯ ಆರ್ಥಿಕ ಬೊಕ್ಕಸವನ್ನ ಸಂಪೂರ್ಣ ಚಿತೆಗೆ ತಳ್ಳಿ ಕರಕಲು ಮಾಡಲು ಕಾಂಗ್ರೆಸ್ ಹೊರಟಿದೆ.
ನಾನು ವಯುಕ್ತಿಕವಾಗಿ ಕಟ್ಟುವ ತೆರಿಗೆ ಹಣ ದೀನ-ದಲಿತರಿಗೆ, ಬಡವರಿಗೆ ಶಿಕ್ಷಣಕ್ಕೆ ವೈದ್ಯಕೀಯ ವೆಚ್ಚಕ್ಕೆ, ಆರೋಗ್ಯಕ್ಕೆ, ರಾಜ್ಯದ ರಸ್ತೆಗಳಿಗೆ ಮೂಲಭೂತ ಸೌಕರ್ಯಗಳಿಗೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಹೀಗೆ ಹತ್ತು ಹಲವು ಯೋಜನೆಗಳಿಗೆ ವಿನಿಯೋಗ ಆಗಬೇಕೆ ಹೊರತು ರಾಜ್ಯ ಎಲ್ಲಾ ಮನೆಯ ಯಜಮಾನಿಗೆ 2000, ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯುತ್ ಉಚಿತ, ನಿರುದ್ಯೋಗ ಭತ್ಯೆಗಳು ಬಡವರಿಗೆ ಸಿಗುತ್ತೋ ಗೊತ್ತಿಲ್ಲ, ಆರ್ಥಿಕವಾಗಿ ಸಬಲರಾಗಿರುವವರು ಉಚಿತ ಯೋಜನೆ ಒಳಗೆ ಬರುವುದರಿಂದ ನನ್ನ ತೆರಿಗೆ ಹಣ ಎಲ್ಲೋ ಪೋಲು ಆಗುತ್ತಿದೆ ಎನ್ನಬಹುದು. – ಅಜಿತ್ ಗೌಡ ಬಡೇನಕೊಪ್ಪ, ಹೊಸನಗರ
4) ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಕಾರ ಐದು ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿಗಳನ್ನು ಜಾರಿಗೆ ತಂದರೇ ಸಾಕು, ಇದು ನನ್ನ ಅಭಿಪ್ರಾಯ. 1) ಉಚಿತ 10 ಕೆಜಿ ಅಕ್ಕಿ, 2) ಕುಟುಂಬದ ಮಹಿಳೆಗೆ 2000 ರೂ ಹಣ 3) ನಿರುದ್ಯೋಗಿ ವಿದ್ಯಾವಂತರಿಗೆ ಮಾಸಿಕ 3000, ಹಾಗೂ 1500ರೂ. ಇನ್ನುಳಿದ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆರಿಗೆ ಉಚಿತ ಬಸ್ ಪ್ರಯಾಣ ಇದು ಬೇಡವಾಗಿತ್ತು.
ಬಡತನ ರೇಖೆಗೆ ಒಳ್ಳಪಟ್ಟವರಿಗೆ ಹಾಗೂ ಬಿಪಿಎಲ್ ಕಾರ್ಡ್ ಸಿಗದ ಅರ್ಥಿಕವಾಗಿ ಮಧ್ಯಮ ವರ್ಗದವರಿಗೆ ಈ ಮೇಲ್ಕಂಡವವರಿಗೆ ಸರ್ಕಾರ ಕೊಡಬೇಕಾಗಿದೆ, ಉಚಿತ ಅಕ್ಕಿಗೆ ಮತ್ತೊಮ್ಮೆ ಸಮೀಕ್ಷೆ ಮಾಡುವ ಅಗತ್ಯ ಇಲ್ಲ, ಈಗಾಗಲೇ ಕೇಂದ್ರದ 5ಕೆಜಿ ರಾಜ್ಯದ 10ಕೆಜಿ ಪಡೆಯುವ ಬಿಪಿಎಲ್ ಕಾರ್ಡ್ ದಾರರಿಗೆ ಕೊಡಬೇಕು. ಇನ್ನುಳಿದ ಸೌಲಭ್ಯವನ್ನು ಕೊಡುವಾಗ ಬಿಪಿಎಲ್ ಕಾರ್ಡ ಪಲಾನುಭವಿಗಳ ಜೊತೆಗೆ ಮಧ್ಯಮ ವರ್ಗದವರಿಗೆ ಸಮೀಕ್ಷೆ ಮಾಡಿ ಕೊಡಬೇಕು. – ಕಿರುಗುಂದ ನಜೀರ್, ಮೂಡಿಗೆರೆ ತಾಲ್ಲೂಕು (9449700100)
5) 5 ಗ್ಯಾರೆಂಟಿ ಇಂದ ಜನ ಸೋಮಾರಿ ಆಗುತ್ತಾರೆ. ವಿದ್ಯೆ ಮತ್ತು ಆರೋಗ್ಯ ಉಚಿತ ಕೊಡಬೇಕು. ರಾಜ್ಯವನ್ನು ಸಾಲ ಸೂಲಕ್ಕೆ ಸಿಕ್ಕಿಸಬಾರದು. – ಅನಂತ ಮೂರ್ತಿ, ಕಿಗ್ಗಾ, ಶೃಂಗೇರಿ ತಾಲ್ಲೂಕು
6) ಚುನಾವಣೆ ಗೆಲ್ಲಲು ಉಚಿತ ಕೊಡುತ್ತೇವೆ ಎಂದು ಭರವಸೆ ನೀಡುವುದೇ ಮೊದಲ ತಪ್ಪು. ಇದರಿಂದ ಬೊಕ್ಕಸಕ್ಕೆ ಹೊರೆಯಾಗುವುದಲ್ಲದೆ ಜನರು ದುಡಿದು ತಿನ್ನುವ ಪದ್ದತಿಯಿಂದ ಹೊರ ಬಂದು ಸೋಮಾರಿಗಳಾಗುವುದಿಲ್ಲವೇ? ಇದೇ ಹಣವನ್ನ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉತ್ತಮ ರಸ್ತೆ, ಕುಡಿಯುವ ನೀರು, ಮನೆ ಕೊಡಲು ಬಳಸಬಹುದಲ್ವಾ? ಈಗಾಗಲೇ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿ ಶೇ. 80 ಭಾಗ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದು ಸರ್ಕಾರಗಳಿಗೆ ತಿಳಿದಿದ್ದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಯಾರು ಹೊಣೆ? ಭವ್ಯ ಭಾರತದ ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಸರ್ಕಾರಗಳು ಕೇವಲ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಕೈ ತೊಳೆದು ಕೊಂಡು ಜನಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಆಡಳಿತ ನಡೆಸುವವರು ಕೋಟ್ಯಂತರ ಹಣವನ್ನ ಭ್ರಷ್ಟಾಚಾರದ ಮೂಲಕ ಸಂಪಾದನೆ ಮಾಡುತ್ತಾ. ಮುಂದಿನ ಚುನಾವಣೆಗೆ ತಯಾರಿ ಮಾಡುತ್ತಿರುವುದನ್ನ ನೋಡುತ್ತಲೇ ಸುಮ್ಮನಿರುವುದು ಅಪರಾಧವಲ್ವಾ? ಇದು ನಿಲ್ಲುವ ಕಾಲ ಯಾವಾಗ ಬರುತ್ತೆ? – ಉಮಾಶಂಕರ್ ಎಸ್ ಎಂ, ಸಿಡಿಗಳಲೆ, ನಿಡ್ತ ಅಂಚೆ, ಸೋಮವಾರ ಪೇಟೆ, ಕೊಡಗು ಜಿಲ್ಲೆ. (9482420377)
7) ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸರ್, ಮೊದಲನೆಯದಾಗಿ ಯಾವುದೆ ಕಾರಣಕ್ಕೂ, ಯಾವುದೆ ಪಕ್ಷ ಆಡಳಿತಕ್ಕೆ ಬಂದರು ಯಾವುದನ್ನು ಫ್ರೀ ಆಗಿ ಕೊಡಬಾರದು. ಇದಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಕಾನೂನು ತಂದರೆ ಒಳ್ಳೆಯದು. ಇನ್ನೂ ಇವರೂ ಫ್ರೀ ಆಗಿ ಕೊಡುವುದರಿಂದ ಮುಂದೆ ಜನರಿಗೆ ತುಂಬಾ ತೊಂದರೆ ಆಗುತ್ತದೆ. ಯಾವುದೆ ಪಕ್ಷ ಫ್ರೀ ಆಗಿ ಕೊಟ್ಟರು ಅದು ಅವರ ಪಕ್ಷದಿಂದ ಕೊಡುವಂತಹದ್ದಲ್ಲ. ಎಲ್ಲಾ ನಮ್ಮ ಟ್ಯಾಕ್ಸ ನಿಂದಲೆ ನಮಗೆ ಕೊಡುವಂತಹದು. ನಮ್ಮ ಕರ್ನಾಟಕ ಇನ್ನು 10 ವರ್ಷ ಅಭಿವೃದ್ಧಿ ಕಳೆದುಕೊಳ್ಳುತ್ತದೆ. ಇವರು ಅಕ್ಕಿ ಕೊಟ್ಟು ಕರೆಂಟ್ ಫ್ರೀ ಆಗಿ ಕೊಟ್ಟರೆ ಇನ್ನು 2000 ಕೊಟ್ಟರು ಸಾಮಾನ್ಯ ವರ್ಗದವರು ಕೆಲಸ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕರ್ನಾಟಕದಲ್ಲಿ ಸಾಮಾನ್ಯ ವರ್ಗದವರು ಮಾತ್ರ ಕೆಲಸ ಮಾಡುವವರು, ಬೇರೆ ವರ್ಗದ ಜನರು ಕೆಲಸ ಮಾಡುವುದಿಲ್ಲ. ಜನರು ಕೆಲಸ ಮಾಡದಿದ್ದಾಗ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಹಾಗೂ ಸರ್ಕಾರಗಳು ಅಭಿವೃದ್ಧಿಗೆ ಹಣ ಪೂರೈಕೆ ಮಾಡುವುದು ಹೇಗೆ. ಅಭಿವೃದ್ಧಿಯ ಹಣ ಪೂರ್ತಿ ಫ್ರೀ ಕೊಡಲು ಸಾಕಾಗುವುದಿಲ್ಲ. ಜನರನ್ನು ಸೋಮಾರಿಗಳನ್ನಾಗಿ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ. ಇವರು ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಿದರೆ, ರಾಜ್ಯ ಉದ್ಧಾರವಾಗುತ್ತದೆ. ದೇವರು ಇವರಿಗೆ ಒಳ್ಳೆಯ ಬುದ್ದಿಯನ್ನು ಕೊಡಲಿ -ಹರೀಶ್, ಬೇಗಾರು, ಶೃಂಗೇರಿ ತಾಲೂಕು.
8) ಈ 5 ಗ್ಯಾರಂಟಿಗಳಲ್ಲಿ ಒಬ್ಬರು ಮರಣ ಹೊಂದುತ್ತಾರೆ ಅಂದರೆ ಅವರನ್ನು ಉಳಿಸುವ ಗ್ಯಾರಂಟಿ ಯಾವುದು ಇಲ್ಲ!. 5 ಗ್ಯಾರಂಟಿಗಳ ಬದಲು ಸರ್ಕಾರಿ ಆಸ್ಪತ್ರೆಗಳನ್ನು ಪ್ರಾರಂಭಿಸುವುದು ಉನ್ನತ ಆರೋಗ್ಯ ಸಿಗುವ ರೀತಿ ಮಾಡಬಹುದು.
ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ರೀತಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಆಹಾರ ಸಿಗುವ ರೀತಿ ನೋಡಿಕೊಳ್ಳುವುದು.” ಕೃಷಿಗೆ ಪ್ರೋತ್ಸಾಹ ನೀಡುವುದು. ದಿನ ಬಳಕೆ ಆಹಾರದ ಹಣವನ್ನು ಕಡಿಮೆ ಮಾಡುವುದು. ರೈತ ಬೆಳೆದ ಬೆಳೆಗೆ ಉನ್ನತ ಬೆಲೆಯನ್ನು ಕೊಡುವುದು. ಗೋಮಾತೆನ್ನು ರಕ್ಷಿಸುವುದು. ಗೋಮಾತೆ ಕಡಿದರೆ ಅವರಿಗೆ ಕಠಿಣ ಶಿಕ್ಷಣ ವಿಧಿಸುವುದು. ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಡಿಮೆ ಮಾಡುವುದರ ಬಗ್ಗೆ ಹೆಚ್ಚಿನ ಒಲವನ್ನು ನೀಡುವುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ ಗಳನ್ನು ಹೆಚ್ಚಿಸುವುದು. ಮತಾಂತರವನ್ನು ಬಹಿಷ್ಕರಿಸುವುದು ಮತಾಂತರ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವುದು. – ಚೇತನ ಮಳವಳ್ಳಿ, ಕಾವಡಿ ಶೃಂಗೇರಿ ತಾಲೂಕು
9) ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕೊಟ್ಟ ಪಂಚ ಭಾಗ್ಯಗಳನ್ನು ಎಲ್ಲರಿಗೂ ಸಿಗುವಂತೆ ಈ ಕೂಡಲೇ ಜಾರಿಮಾಡಬೇಕು. ಜಾರಿ ಮಾಡುವಾಗ ಇವರಿಗೆ ಸಿಗುವುದಿಲ್ಲ ಅವರಿಗೆ ಸಿಗುವುದಿಲ್ಲ ಎಂದು ಕಾರಣವನ್ನು ನೀಡದೆ ಕೊಟ್ಟ ಮಾತಿನಂತೆ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಜನ ಈ ಭಾಗವನ್ನು ನೋಡಿಯೇ ಕಾಂಗ್ರೆಸ್ ಗೆ ಮತ ನೀಡಿದ್ದು. – ಪ್ರಶಾಂತ್ ಕುಮಾರ್, ಡಿ ಬೋವಿಪಾಲ್, ಕಳಸ
10) ಕಾಂಗ್ರೆಸ್ ಗ್ಯಾರಂಟಿ ಕುರಿತು ಸಿದ್ದುವರು ವರ್ಣರಂಜಿತವಾಗಿ ಕರ್ನಾಟಕದಲ್ಲಿ ಎಲ್ಲ ಜನರನ್ನು ಮರುಳು ಮಾಡಿದ್ರೂ, ಜೊತೆಗೆ ಯಾವ ಶರತ್ತುಗಳನ್ನು ಹಾಕಿರಲಿಲ್ಲ ಆದರೆ ಈಗ ಯೋಜನೆಗಳಿಗೆ ಶರತ್ತು ವಿಧಿಸುವುದು ಸರಿಯೇ? ಒಟ್ಟಿನಲಿ ಉತ್ತಮ ಭ್ರಷ್ಟಾಚಾರಮುಕ್ತ ಆಡಳಿತವನ್ನು ನಿರೀಕ್ಷಿಸೋಣವೇ? – ನಟರಾಜ್ ಎಸ್. ಎಸ್, ಸುಂಕುರಡಿ, ಶೃಂಗೇರಿ ತಾಲೂಕು.