ಆಲ್ದೂರು; (ನ್ಯೂಸ್ ಮಲ್ನಾಡ್ ವರದಿ) ಓಮಿನಿ ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ದೊಡ್ಡನಗುಡ್ಡದಲ್ಲಿ ನಡೆದಿದೆ.
ಇದನ್ನೂ ಓದಿ; ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು mbbs ವಿದ್ಯಾರ್ಥಿಗಳು ಅರೆಸ್ಟ್
ಕಾಫಿ ಎಸ್ಟೇಟ್ ನಲ್ಲಿ ಕಳೆತೆಗೆಯಲೆಂದು ಓಮಿನಿ ಕಾರಿನಲ್ಲಿ ಏಳು ಮಂದಿ ಹೋಗುತ್ತಿದ್ದ ವೇಳೆ ಆಲ್ದೂರು ಸಮೀಪದ ದೊಡ್ಡನಗುಡ್ಡ ಬಳಿ ಏಕಾಏಕಿ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಕಾರಿನ ತುಂಬಾ ಆವರಿಸಿಕೊಂಡಿದೆ. ಕಾರು ಮತ್ತು ಕಾರಿನ ಮೇಲೆ ಇರಿಸಿದ್ದ ನಾಲ್ಕೈದು ಕಳೆ ತೆಗೆಯುವ ಯಂತ್ರಗಳು ಸೇರಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಆಲ್ದೂರು; ನಡು ರಸ್ತೆಯಲ್ಲೇ ಹೊತ್ತಿ ಉರಿದ ಓಮಿನಿ ಕಾರು pic.twitter.com/Q40PgBOUz5
— News Malnad (@NewsMalnadMedia) June 26, 2023
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮೂಡಿಗೆರೆ: ಸರ್ಕಾರಿ ಬಸ್ ಗೆ ಅಡ್ಡ ಬಂದ ಒಂಟಿ ಸಲಗ
- ಚಿಕ್ಕಮಗಳೂರು: ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್ : ಆರ್.ಅಶೋಕ್
- ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಸಚಿನ್ ಬೇಂಬೊರೆ ನೇಮಕ
ಕಾರಿನಲ್ಲಿದ್ದ ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಇದನ್ನೂ ಓದಿ; ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್
ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ; ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ
70ನೇ ವಸಂತಕ್ಕೆ ಕಾಲಿಟ್ಟ ದತ್ತಮೇಷ್ಟ್ರು, ಕಳೆದ ರಾತ್ರಿ ದತ್ತ ಮನೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದರು. ಪಾತೇನಹಳ್ಳಿಯಲ್ಲಿ ಡಿಜೆ ಸೌಂಡ್ ಗೆ ಮನಸ್ಸೋ ಇಚ್ಛೆ ಕುಣಿದ ಅಭಿಮಾನಿಗಳ ಜೊತೆ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇನ್ನು ದತ್ತ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಂದ ಅನ್ನಸಂತರ್ಪಣೆ ಕೂಡ ಮಾಡಲಾಗಿತ್ತು.