ಚಿಕ್ಕೋಡಿ: ಕೊರೋನಾ ರೂಪಾಂತರ ವೈರಸ್ ಲಗ್ಗೆ ಯಿಟ್ಟ ಹಿನ್ನೆಲೆಯಲ್ಲಿ ಗಡಿಗಳಲ್ಲಿ ತಪಾಸಣೆ ಮಾಡುತ್ತಿದ್ದ ಪೋಲೀಸರ ಮೇಲೆ ಹಲ್ಲೆಯನ್ನು ನಡೆಸಿದ ಘಟನೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ನಿಪ್ಪಾಣಿ ಚೆಕ್ ಪೋಸ್ಟ್ ಬಳಿ ಭಾನುವಾರ ನಡೆದಿದೆ.
ಕೊರೋನಾ ರೂಪಾಂತರಿ ಒಮಿಕ್ರಾನ್ ವೈರಸ್ ದೇಶದಲ್ಲಿ ಲಗ್ಗೆಯಿಟ್ಟ ಹಿನ್ನೆಲೆಯಲ್ಲಿ ಎಲ್ಲಾ ಗಡಿ ಜಿಲ್ಲೆಗಳಲ್ಲಿ ತಪಾಸಣೆಯನ್ನು ಕಡ್ಡಾಯಗೊಳಿಸಿದೆ. ಇದರ ಪ್ರಕಾರ ದಿಢೀರನೆ ಗಡಿಯಲ್ಲಿ ತಪಾಸಣೆ ಶುರುಮಾಡಿದ ಪೋಲೀಸರ ಮೇಲೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಮಾತಿನ ಚಕಮಕಿಗೆ ಇಳಿದರು.
ಗಡಿಯಲ್ಲಿ ತಪಾಸಣೆ ಮಾಡಲು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆ ಅಲ್ಲಿದ್ದ ವಾಹನವೊಂದನ್ನು ತಡೆದು ಪಕ್ಕಕ್ಕೆ ಹಾಕಿ ಎಂದು ಹೇಳಿದ ಪೊಲೀಸರಿಗೆ ಕೊಲ್ಲಾಪುರ ಮೂಲದ ಡಾ. ಸ್ವಾಮಿ ನಂದಿಮಠ ಎಂಬುವವರು ಪೋಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿ ಅವಾಚ್ಯ ಪದಗಳಲ್ಲಿ ಬೈದಿದ್ದಾರೆ.
ಸದ್ಯ ಪೊಲೀಸರು ಆ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.