Monday, December 11, 2023
Homeಮಲೆನಾಡು60 ವರ್ಷದ ಅಂಕಲ್ ಜೊತೆ ಮದುವೆಗೆ ಸಿದ್ಧತೆ ನಡೆಸಿ, ತಾಳಿ ಒಡವೆಗಳೊಂದಿಗೆ ಆಂಟಿ ಎಸ್ಕೇಪ್

60 ವರ್ಷದ ಅಂಕಲ್ ಜೊತೆ ಮದುವೆಗೆ ಸಿದ್ಧತೆ ನಡೆಸಿ, ತಾಳಿ ಒಡವೆಗಳೊಂದಿಗೆ ಆಂಟಿ ಎಸ್ಕೇಪ್

ಶಿವಮೊಗ್ಗ: ಎರಡನೇ ಮದುವೆಯ ಆಸೆ ಇಟ್ಟುಕೊಂಡಿದ್ದ 60 ವರ್ಷದ ಅಂಕಲ್ ಒಬ್ಬರ ಜೊತೆ ಮದುವೆಯಾಗಬೇಕಿದ್ದ ಮಹಿಳೆಯೊಬ್ಬರು ಮದುವೆಗೆ ತಂದಿದ್ದ ತಾಳಿಯೊಂದಿಗೆ ಎಸ್ಕೇಪ್ ಆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಗ್ರಾಮದ 60 ವರ್ಷದ ಕೃಷಿಕ ನಂಜುಂಡಪ್ಪ, ಹಾಗೂ ಮದುವೆಯಾಗಬೇಕಿದ್ದ ಮಹಿಳೆ ಬೆಂಗಳೂರಿನ ಯಲಹಂಕದ ಚಂದ್ರಿಕಾ.

ನಂಜುಂಡಪ್ಪ ನವರಿಗೆ ಈಗಾಗಲೇ ಮದುವೆಯಾಗಿ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆ ಆಗಿ ಮಕ್ಕಳಿದೆ ಕಳೆದ 7 ತಿಂಗಳ ಹಿಂದೆ ನಂಜುಂಡಪ್ಪನವರ ಹೆಂಡತಿ ಮರಣ ಹೊಂದಿದ್ದರಿಂದ ಒಂಟಿತನ ಅನುಭವಿಸುತ್ತಿದ್ದ ಇವರು ಮತ್ತೊಂದು ಮದುವೆಯಾಗಲು ನಿರ್ಧರಿಸಿ ನಗರದ ಸವಳಂಗ ರಸ್ತೆಯಲ್ಲಿರೋ ಕನ್ನಡ ಮ್ಯಾಟ್ರಿಮೊನಿಯಲ್ಲಿ ಮೂರುವರೇ ಸಾವಿರ ಹಣವನ್ನು ಕೊಟ್ಟು ನೋಂದಣಿ ಮಾಡಿಸಿದ್ದರು.

ಅನಂತರ ಬೆಂಗಳೂರು ಮೂಲದ ಚಂದ್ರಿಕಾ ನಂಜುಂಡಪ್ಪನವರನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಳು. ಆಕೆ ಮದುವೆ ಒಪ್ಪಿಗೆ ಕೊಟ್ಟ ತಕ್ಷಣ ಮದುವೆಯ ದಿನಾಂಕವನ್ನು ಸಹ ನಿಗದಿ ಮಾಡಲಾಗಿತ್ತು. ಮೊದಲು ನವೆಂಬರ್ 15 ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆ ಆಗಲು ಸಿದ್ಧತೆ ನಡೆಸಿದ್ದರು ನಂತರ ಸ್ನೇಹಿತರೊಡನೆ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಮದುವೆಗೆ ಅವಕಾಶ ಇಲ್ಲ ಎಂದು ಹೇಳಿದ ಕಾರಣ ಶಿವಮೊಗ್ಗಕ್ಕೆ ಹಿಂತಿರುಗಿದ್ದರು.

ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬೈಕ್ ತರ್ತೀನಿ ಎಂದು ಹೋದಾಗ ಊಟ ಮಾಡಿ ಬರ್ತೀನಿ ಎಂದು ಹೇಳಿ ಚಂದ್ರಿಕಾ ಹೋಗಿದ್ದಳು. ಆದರೆ ಊಟ ಮಾಡಲು ಹೋದ ಚಂದ್ರಿಕಾ ಹಿಂತಿರುಗಲೇ ಇಲ್ಲ. ಚಂದ್ರಿಕಾ, ನಂಜುಂಡಪ್ಪ ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರ, 2 ಬೆಳ್ಳಿ ಕಾಲು ಚೈನ್, 2 ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆಯೊಂದಿಗೆ ಎಸ್ಕೇಪ್ ಆಗಿದ್ದಾಳೆ.

ಒಟ್ಟಾರೆ ಈ ಇಳಿವಯಸ್ಸಿನಲ್ಲಿಯೂ ಮದುವೆಯಾಗುವ ಆಸೆಯನ್ನು ಇಟ್ಟುಕೊಂಡು ಮ್ಯಾಟ್ರಿಮೊನಿಯಲ್ಲಿ ನೋಂದಣಿಯಾಗಿ ಸಂಗಾತಿಯನ್ನು ಹುಡುಕಿದ್ದ ನಂಜುಂಡಪ್ಪನವರಿಗೆ ಚಂದ್ರಿಕಾ ಆಕಾಶದಲ್ಲಿ ಚಂದ್ರನನ್ನು ತೋರಿಸಿ ಒಡವೆಗಳೊಂದಿಗೆ ಜೂಟ್ ಆಗಿದ್ದಾರೆ.

Most Popular

Recent Comments