ಬಾಲಸೋರ್/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರು ಹೌರಾ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್, ಕೋರಮಂಡಲ್ ಎಕ್ಸ್ ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಮಂದಿ ಮೃತಪಟ್ಟು, ಸುಮಾರು 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 8.30ರ ಸುಮಾರಿಗೆ ಅವಘಡ ಸಂಭವಿಸಿದೆ. ಈ ಪೈಕಿ ಚಿಕ್ಕಮಗಳೂರಿನ 110 ಮಂದಿ ಸೇಫ್ ಆಗಿದ್ದಾರೆ.
ಇದನ್ನೂ ಓದಿ; ನ್ಯಾಯಕ್ಕಾಗಿ 4 ವರ್ಷದ ಮಗು ಜೊತೆ ರಾತ್ರಿ 1 ಗಂಟೆವರೆಗೂ ಠಾಣೆಯಲ್ಲಿ ಕುಳಿತ ಮಹಿಳೆ
ಇದನ್ನೂ ಓದಿ; ಭಾರೀ ಗಾಳಿ, ಮಳೆ; ಬೃಹತ್ ಗಾತ್ರದ ಮರ ಬಿದ್ದು ಮನೆ ಜಖಂ
‘ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಯ ಮೇಲೆ ಬಿದ್ದಿದ್ದವು. ಈ ಬೋಗಿಗಳಿಗೆ ಕೋಲ್ಕತ್ತದಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಈ ರೈಲಿನ ಬೋಗಿಗಳೂ ಹಳಿ ತಪ್ಪಿ ಮಗುಚಿ ಬಿದ್ದವು. ಇದರಿಂದಾಗಿ ಪಕ್ಕದ ಹಳಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ರೈಲು ಸಹ ಅಪಘಾತಕ್ಕೆ ಒಳಗಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಫೇಸ್ಬುಕ್ ಪರಿಚಯ: ಮಹಿಳೆಗೆ 6.50 ಲಕ್ಷ ವಂಚನೆ
- ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ವಿರುದ್ಧ ಶಿವಮೊಗ್ಗದಲ್ಲಿ ಎಫ್.ಐ.ಆರ್ ದಾಖಲು
- ಕ್ಷೇತ್ರದ ಮತದಾರರು ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ
ಕಳಸದ 110 ಮಂದಿ ಸೇಫ್:
ಚಿಕ್ಕಮಗಳೂರು: ಒಡಿಸಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸಮ್ಮೇದ್ ಸಿಖರ್ಜಿ ಯಾತ್ರೆಗಾಗಿ ಕಳಸದ 110 ಮಂದಿ ಗುರುವಾರ ರಾತ್ರಿ 11.30ಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದರು. 24ನೇ ಜೈನ ಧರ್ಮದ ತೀರ್ಥಂಕರು ಮೋಕ್ಷ ಹೊಂದಿದ ಪುಣ್ಯಕ್ಷೇತ್ರಕ್ಕೆ ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ್ ಸಮುದಾಯದವರು ತೆರಳುತ್ತಿದ್ದರು. ಇವರೆಲ್ಲರೂ ಕೊನೆಯ ಬೋಗಿಯಲ್ಲಿ ಇದ್ದುದರಿಂದ ಯಾವುದೇ ಅನಾಹುತವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತವನ್ನು ಕಣ್ಣಾರೆ ಕಂಡ ಕುದುರೆಮುಖದ ಸಂತೋಷ್ ಎಂಬುವರು ಈ ಬಗ್ಗೆ ವಿಡಿಯೊ ಮಾಡಿ, ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಎ.ಎಸ್.ಪೊನ್ನಣ್ಣ ನೇಮಕ
ಅಪಘಾತದ ನಡೆದ ಸಂದರ್ಭದಲ್ಲಿ ಬೆಂಗಳೂರು-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ. ನಾವು ಕೋಲ್ಕತ್ತದ ಚಿಕಾತಿ ಯಾತ್ರೆಗೆ ಹೊರಟಿದ್ದೆವು. ನಾವಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8.30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಡ್ತು. ಬಸ್ ಅಪಘಾತವಾದಾಗಲೆಲ್ಲ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು ಎಂದು ಹೇಳಿದ್ದಾರೆ.
ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿಬಿದ್ದಿದ್ದವು. ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲಿದ್ದ ಸ್ಥಳೀಯರು, ಜನರೆಲ್ಲ ಸಹಾಯಕ್ಕೆ ಬಂದರು. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಲ್ಲಿನ ಡಿಸಿ, ಅಧಿಕಾರಿಗಳು ಬಂದು ನಮ್ಮನ್ನೆಲ್ಲ ವಿಚಾರಿಸಿದರು. ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಮಾಹಿತಿ ಪಡೆದು, ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ರೈಲಿನ ವ್ಯವಸ್ಥೆ ಮಾಡಿಸಿಕೊಟ್ಟರು. ನಾವೆಲ್ಲರೂ ಸೇಫ್ ಆಗಿದ್ದು, ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ ಎಂದು ಕುದುರೆಮುಖದ ಸಂತೋಷ್ ಹೇಳಿದ್ದಾರೆ.
ಇದನ್ನೂ ಓದಿ; ಕಾಶ್ಮೀರದ ತೀತ್ವಾಲ್‌ನ ಶಾರದಾಂಬೆಗೆ ಶೃಂಗೇರಿ ಶ್ರೀಗಳಿಂದ ವಿಶೇಷ ಪೂಜೆ