Thursday, April 25, 2024
Homeರಾಜ್ಯನವಜಾತ ಶಿಶು ಮಾರಾಟ : ಮೂವರ ಬಂಧನ

ನವಜಾತ ಶಿಶು ಮಾರಾಟ : ಮೂವರ ಬಂಧನ

ಬೆಂಗಳೂರು: ನವಜಾತ ಶಿಶುವೊಂದರ ಮಾರಾಟದ ಪ್ರಕರಣದಲ್ಲಿ ಮೂವರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ತರನ್ನಂ ಬಾನು (38), ನಿಶಾತ್ ಕೌಸರ್ (45) ಮತ್ತು ಕೆ. ಸವುದ್ ಎಂದು ಗುರುತಿಸಲಾಗಿದೆ. ಸೋಮವಾರ ಅಗಡಿ ಆಸ್ಪತ್ರೆಯ ಸಮೀಪ ಪುರುಷ ಹಾಗೂ ಮಹಿಳೆಯೊಬ್ಬರು ಜಗಳವಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಅವರಿಬ್ಬರನ್ನು ವಿಚಾರಣೆಗೊಳಪಡಿಸಲು ಯತ್ನಿಸಿದಾಗ ಪುರುಷ ಅಲ್ಲಿಂದ ಪರಾರಿಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಆಡುಗೋಡಿ ನಿವಾಸಿ ತರನ್ನಂ ಬಾನು ಕೆಲವು ದಿನಗಳ ಹಿಂದೆ ಆಕೆಯ ಮನೆ ಕೆಲಸದಾಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದನ್ನು ದೂರದ ಸಂಬoಧಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾಳೆ.

ಮಗುವಿನ ತಂದೆ ಮುಬಾರಕ್ ಪಾಶ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿ ಬಾನು ಜೊತೆಗೆ ಪಾಲು ಕುದುರಿಸಿದ್ದಾನೆ. ಆ ಮಗುವಿನ ತಾಯಿಯನ್ನು ಮನವೊಲಿಸಿದ ಬಳಿಕ ಮಗುವನ್ನು ಹೊರಗಡೆ ತಂದು ಬಾನುಗೆ ಹಸ್ತಾಂತರ ಮಾಡಿದ್ದಾನೆ. ನಂತರ ಆ ಮಗುವನ್ನು ಆಕೆ ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಿಲ್ಲದ ತನ್ನ ಸಂಬoಧಿ ಸವೂದ್ ಅವರಿಗೆ ಮಾರಾಟ ಮಾಡಿದ್ದಾಗಿ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಆ ಮಗುವಿಗೆ 1.30 ಲಕ್ಷ ಕೊಡಲು ಒಪ್ಪಿದ ಸವುದ್, ಮುಂಗಡವಾಗಿ 50 ಸಾವಿರ ರೂ. ಹಣವನ್ನು ಬಾನುಗೆ ಪಾವತಿಸಿದ್ದರು. ಆದರೆ, ಬಾನು ಈ ಹಣದಲ್ಲಿ ಪಾಶನಿಗೆ ಪಾಲು ನೀಡಿರಲಿಲ್ಲವಂತೆ. ಇದಕ್ಕಾಗಿ ಪಾಶ, ಅಗಡಿ ಆಸ್ಪತ್ರೆ ಮುಂಭಾಗ ಬಾನು ಜೊತೆಗೆ ಜಗಳವಾಡುತ್ತಿದ್ದಾಗ ಆಕೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾನು ನೀಡಿದ ಹೇಳಿಕೆ ಆಧಾರದ ಮೇಲೆ ಸಾವುದ್ ಮತ್ತು ಕೌಶರ್ ಅವರನ್ನು ಬಂಧಿಸಲಾಗಿದೆ. 38 ದಿನಗಳ ಗಂಡುಮಗುವನ್ನು ರಕ್ಷಿಸಿ ಆಕೆಯ ತಾಯಿ ಬಳಿಗೆ ಮತ್ತೆ ಸೇರಿಸಲಾಗಿದೆ. ಮಗುವಿನ ತಂದೆ ಪಾಶನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Most Popular

Recent Comments