ಬೆಂಗಳೂರು: ಹೆಸರುಘಟ್ಟದ ಖಾಸಗಿ ಆಸ್ಪತ್ರೆಯ ಕಿಟಕಿಯಿಂದ ನವಜಾತ ಶಿಶುವನ್ನು ಎಸೆದಿದ್ದ ಪ್ರಕರಣಕ್ಕೆ ಸಂಬoಧಿಸಿದoತೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಿಟಕಿಯಿoದ ಆಚೆ ಎಸೆದಿದ್ದಕ್ಕಾಗಿ ನವಜಾತ ಶಿಶು ಮರಣ ಹೊಂದಿತ್ತು. ಹಾಗೂ ಕೊಲೆ ಆರೋಪದಡಿ ಮಹಿಳೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಾಗಿತ್ತು.
ಕ್ಲಿನಿಕ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯ ಪ್ರಿಯಕರ ಶಶಾಂಕ್ ಎಂಬುವನನ್ನು ಬಂಧಿಸಿದ್ದಾರೆ. ಈತ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಮಾಗಡಿಯ ಗುಡೆಮಾರನಹಳ್ಳಿ ನಿವಾಸಿಯಾಗಿದ್ದಾನೆ.
ಮಹಿಳೆ ಜೊತೆ ಶಶಾಂಕ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆ ಮಂಗಳವಾರ ಸಂಜೆ ಖಾಸಗಿ ಕ್ಲಿನಿಕ್ ನಲ್ಲಿ ಅವಧಿಪೂರ್ವ ಮಗುವಿಗೆ ಜನ್ಮವಿತ್ತಿದ್ದಳು. ಮಗು ಮತ್ತು ತಾಯಿಯನನ್ನು ಅಬ್ಸರ್ವೇಷನ್ ನಲ್ಲಿರಿಸಿದ್ದರು.
ಅದಾದ ನಂತರ ಆಕೆ ವಾಶ್ ರೂಂ ಗೆ ಹೋಗುವ ನೆಪದಲ್ಲಿ ಕಿಟಕಿ ಮೂಲಕ ನವಜಾತ ಶಿಶುವನ್ನು ಕಿಟಕಿ ಮೂಲಕ ಆಚೆ ಎಸೆದಿದ್ದಳು. ದಾರಿ ಹೋಕರು ಇದನ್ನು ಗಮನಿಸಿ ಪರಿಶೀಲನೆ ನಡೆಸಿದ್ದರು. ನಂತರ ಆಕೆ ಸ್ಥಳದಿಂದ ಪರಾರಿಯಾಗಿದ್ದಳು. ಸ್ಥಳಕ್ಕಾಗಮಿಸಿದ ಸೋಲದೇವನಹಳ್ಳಿ ಪೊಲೀಸರು ಆಕೆಯನ್ನು ಬೆನ್ನಟ್ಟಿ ಹಿಡಿದಿದ್ದರು.ಮಗುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಮಹಿಳೆಗೆ ಹೆರಿಗೆ ನಂತರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಹಿಳೆಯನ್ನು ಶಶಾಂಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ತನ್ನ ಸ್ನೇಹಿತನ ಮನೆಗೆ ತೆರಳಿದ್ದ, ಆತ ಮರಳಿದ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದರು. ತನಗೆ ಮತ್ತು ಮಹಿಳೆಗೆ ಸಂಬoಧವಿತ್ತು, ವಿವಾಹವಾಗದ ಕಾರಣ ಮಗುವನ್ನು ಕೊಲ್ಲಲು ನಿರ್ಧರಿಸಿದೆವು ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.
ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ನಾವು ಕಾಯುತ್ತಿದ್ದೇವೆ, ನಂತರ ನಾವು ಆಕೆಯನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಸಿದ್ದಾರೆ. ಅವಿವಾಹಿತ ತಾಯಿಗೆ ಸಮಾಜ ಹೇಗೆ ನಡೆಸಿಕೊಳ್ಳುತ್ತದೆ ಮತ್ತು ಹೆತ್ತವರನ್ನು ಎದುರಿಸಲು ಸಾಧ್ಯವಿಲ್ಲ ಎಂದು ಆಕೆ ವೈದ್ಯರ ಬಳಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.