ಇದೀಗ ಮಾರ್ಕ್ ಜುಗರ್ ಬರ್ಗ್ ಅವರು ಹೊಸ ಥ್ರೆಡ್ಸ್ ಫೀಚರ್ ಅನ್ನು ಪರಿಚಯಿಸಿದ್ದು, ಇದು ಟ್ವಿಟರ್ ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇದನ್ನೂ ಓದಿ; ಗಮನಿಸಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ 07-07-2023
ಸ್ಮಾರ್ಟ್ ಫೋನ್ ಗಳು ಇಂದಿನ ದಿನದಲ್ಲಿ ಹೇಗೆ ಅಗತ್ಯ ಸಾಧನವಾಗಿದೆಯೋ ಅದೇ ರೀತಿ ಸೋಶಿಯಲ್ ಮೀಡಿಯಾಗಳು ಸಹ ಅಷ್ಟೇ ಮುಖ್ಯವಾಗಿದೆ. ದಿನಕ್ಕೊಂದರಂತೆ ಕೆಲವೊಂದು ಸೋಶಿಯಲ್ ಮೀಡಿಯಾಗಳು ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿರುತ್ತದೆ. ಸೋಶಿಯಲ್ ಮೀಡಿಯಾ ಒಂದು ರೀತಿಯಲ್ಲಿ ಮನರಂಜನಾ ಮಾಧ್ಯಮ ಎಂದರೂ ತಪ್ಪಿಲ್ಲ. ಇನ್ನು ಮೆಟಾ ಒಡೆತನದಲ್ಲಿರುವ ಆ್ಯಪ್ ಗಳು ಇತ್ತೀಚೆಗೆ ಬಹಳಷ್ಟು ಜನಪ್ರಿಯತೆಯನ್ನು ಪಡೆದಿವೆ. ಅದರಲ್ಲೂ ಟ್ವಿಟರ್, ಇನ್ ಸ್ಟಾಗ್ರಾಮ್ ಇದೀಗ ಭಾರೀ ಚರ್ಚೆಯಲ್ಲಿದೆ. ಏಕೆಂದರೆ ಇದರ ಫೀಚರ್ಸ್ಗಳೇ ಇದಕ್ಕೆ ಕಾರಣ ಅಂತ ಹೇಳಬಹುದು.
ಇದನ್ನೂ ಓದಿ; ಚಿಕ್ಕಮಗಳೂರು: ಪತಿಯ ಪ್ರಿಯತಮೆಯಿಂದಲೇ ನಡೀತಾ ಪತ್ನಿಯ ಭೀಕರ ಕೂಲೆ?
ಮೆಟಾ ಕಂಪನಿ ಒಡೆಯ ಇದೀಗ ಟ್ವಿಟರ್ ಅಪ್ಲಿಕೇಶನ್ ಅನ್ನು ಹೋಲುವ ಥ್ರೆಡ್ಸ್ ಎಂಬ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದುವರೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ವಿಟರ್ ಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಪ್ಲಿಕೇಶನ್ ಗಳು ಬಂದಿರಲಿಲ್ಲ, ಆದರೆ ಇದೀಗ ಜುಕರ್ ಬರ್ಗ್ ಪರಿಚಯಿಸಿದ ಈ ಹೊಸ ಅಪ್ಲಿಕೇಶನ್ ಟ್ವಿಟರ್ ಗೆ ಸರಿಸಮಾನವಾಗಿ ಇರಲಿದೆ ಎಂದು ಹೇಳಲಾಗಿದೆ.
ಟ್ವಿಟರ್ ನಲ್ಲಿ ಹಲವಾರು ಬದಲಾವಣೆ;
ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಒಂದಲ್ಲ ಒಂದು ನಿರ್ಬಂಧ ವಿಧಿಸಲಾಗುತ್ತಿದೆ. ಇದೀಗ ಟ್ವೀಟ್ ವೀಕ್ಷಣೆಗೂ ಮಿತಿ ಹೇರಲಾಗಿದೆ. ಇಷ್ಟೇ ಅಲ್ಲ ಟ್ವೀಟ್ ವೀಕ್ಷಣೆಗೆ ಲಾಗಿನ್ ಕಡ್ಡಾಯ ಮಾಡಲಾಗಿದೆ. ಟ್ವೀಟ್ ಮಿತಿ ನಿಯಮ ಭಾರಿ ಟೀಕೆಗೆ ಕಾರಣವಾಗಿದೆ. ಆಕ್ರೋಶದ ಬೆನ್ನಲ್ಲೇ ಮಿತಿ ಏರಿಕೆ ಮಾಡಿದರೂ ಬಳಕೆದಾರರ ಕೋಪ ತಣ್ಣಗಾಗಿಲ್ಲ.
ಹಾಗದರೆ ಏನಿದು ಥ್ರೆಡ್ಸ್?, ಇದರಲ್ಲಿ ಯಾವುದೆಲ್ಲಾ ಫೀಚರ್ಸ್ ಗಳಿವೆ, ಇದು ಹೇಗೆ ಬಳಕೆ ಆಗುತ್ತದೆ. ಈ ಆ್ಯಪ್ ಬಳಕೆದಾರರಿಗೆ ಲಭ್ಯವಾಗುವುದು ಯಾವಾಗ ಈ ಎಲ್ಲಾ ಮಾಹಿತಿ ಇಲ್ಲಿದೆ.
ಜುಲೈ 6 ರಂದು ಬಳಕೆದಾರರಿಗೆ ಲಭ್ಯವಾಗಿದೆ:
ಇನ್ನು ಈ ಆ್ಯಪ್ ಜುಲೈ 6 ರಂದು ಎಲ್ಲಾ ಬಳಕೆದಾರರಿಗೂ ಲಭ್ಯವಾಗಿದ್ದು, ಇದರಿಂದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮನದಲ್ಲೂ ಸ್ವಲ್ಪ ಭಯ ಹುಟ್ಟಿಸಿದೆ ಅಂತಾನೇ ಹೇಳಬಹುದು. ಜುಲೈ 6 ರಂದು ಜುಕರ್‌ಬರ್ಗ್ ತಮ್ಮ `ಥೆಡ್ಸ್’ ಅನ್ನು ಬಿಡುಗಡೆ ಮಾಡಿದ್ದಾರೆ ವಿಶೇಷವೆಂದರೆ ಥೆಡ್ಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಬಳಿಕ ಜುಕರ್ ಬರ್ಗ್ ಟ್ವಿಟ್‌ವೊಂದನ್ನು ಮಾಡಿದ್ದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ಬರೋಬ್ಬರಿ 11 ವರ್ಷಗಳ ಬಳಿಕ ಜುಕರ್ ಬರ್ಗ್ ಮಾಡಿದ ಟ್ವಿಟ್ ಇದಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮಾರುಕಟ್ಟೆಯಲ್ಲಿ ಇಂದು ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 07.07.2023
- ಮೂಡಿಗೆರೆ: ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ
- ಸಿದ್ದು ಲೆಕ್ಕ – ಬಜೆಟ್ ನ ಎಲ್ಲಾ ಪ್ರಮುಖ ಅಂಶಗಳನ್ನು ಸಿಂಪಲ್ಲಾಗಿ ಓದಿ
ಓಪನ್ ಮಾಡಬಹುದು ಹೇಗೆ?:
ಥ್ರೆಡ್ಸ್ ಎಂಬುದು ಟ್ವಿಟರ್ ನಂತೆಯೇ ಕೆಲಸ ಮಾಡುವ ಅಪ್ಲಿಕೇಶನ್ ಆಗಿದ್ದು, ಇನ್ ಸ್ಟಾಗ್ರಾಮ್ ನಲ್ಲೇ ಬಳಕೆದಾರರು ಡೈರೆಕ್ಟ್ ಆಗಿ ಓಪನ್ ಮಾಡಬಹುದು. ಅಷ್ಟೇ ಅಲ್ಲದೇ ಇನ್ ಸ್ಟಾಗ್ರಾಮ್ ನಲ್ಲಿ ಇದ್ದ ಫಾಲೋವರ್ಸ್ಗಳನ್ನೇ ಈ ಅಪ್ಲಿಕೇಶನ್ ನಲ್ಲಿ ನೋಡಬಹುದು. ಇನ್ನು ಹೆಚ್ಚಿನ ಫೀಚರ್ಸ್ ಗಳನ್ನು ಇದು ಹೊಂದಿದೆ.
ಇದರಲ್ಲಿ ಯಾವೆಲ್ಲಾ ಫೀಚರ್ಸ್ ಗಳಿವೆ?:
ಇನ್ಸ್ಟಾಗ್ರಾಮ್ ಫಾಲೋವರ್ಸ್ ಅನ್ನು ಇಲ್ಲಿ ಮುಂದುವರಿಸಬಹುದಾಗಿದೆ. ಟ್ವಿಟರ್ ಅನ್ನು ಹೋಲುವ ಮೈಕ್ರೋ ಬ್ಲಾಗಿಂಗ್ ಆಗಿದ್ದು, 500 ಅಕ್ಷರವರೆಗಿನ ಪೋಸ್ಟ್ ಬರೆಯಬಹುದಾಗಿದೆ. ಲಿಂಕ್, ಫೋಟೋ, ವೀಡಿಯೋ ಶೇರ್ ಮಾಡಬಹುದು. ಮೂರು ಡಾಟ್ ಮೆನು ಆಯ್ಕೆ ಮೂಲಕ ಪ್ರೊಫೈಲ್ ಬ್ಲಾಕ್ ಮಾಡಬಹುದು, ಅನುಮತಿ, ನಿರಾಕರಣೆ, ಅನುಸರಿಸುವುದನ್ನು ರದ್ದುಗೊಳಿಸುವುದು, ನಿರ್ಬಂಧಿಸುವುದು ಇತ್ಯಾದಿ ಆಯ್ಕೆಯನ್ನು ಕೂಡ ಈ ಆ್ಯಪ್ ನಲ್ಲಿ ನೀಡಲಾಗಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಚಾಕು ಇರಿತ ಪ್ರಕರಣ, ವಿಘ್ನೇಶ್ ಸ್ಥಿತಿ ಗಂಭೀರ
ಡೌನ್‌ಲೋಡ್ ಮಾಡುವುದು ಎಲ್ಲಿ?:
ಮೆಟಾ ಸಂಸ್ಥೆಯ ನೂತನ ಥ್ರೆಡ್ಸ್ ಆಪ್ ಆಂಡ್ರಾಯ್ಡ್ ಮತ್ತು ಆಪಲ್ ಐಫೋನ್ ಗಳಲ್ಲೂ ಲಭ್ಯ ಇದೆ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ ಹಾಗೂ ಐಫೋನ್ ಬಳಕೆದಾರರು ಆಪಲ್ ಸ್ಟೋರ್‌ನಿಂದ ಥ್ರೆಡ್ಸ್ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.