ಬೆಂಗಳೂರು: ನಾರ್ಕೊಟೊಕ್ಸ್ ಕಂಟ್ರೋಲ್ ಬ್ಯೂರೊ ಅಧಿಕಾರಿಗಳ ಬೃಹತ್ ಕಾರ್ಯಾಚರಣೆಯಲ್ಲಿ ಆಲ್ಫಾ ಜೋಲಮ್ ( alfa zolam ) ಡ್ರಗ್ಸ್ ದಂಧೆಕೋರರು ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ವಲಯ ಹಾಗೂ ಹೈದರಾಬಾದ್ ಉಪವಲಯದ ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಲ್ಫಾ ಜೋಲಮ್ ತಯಾರಿಸುತ್ತಿದ್ದ ಲ್ಯಾಬ್ ಮೇಲಿನ ದಾಳಿ ವೇಳೆ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ. ಸುಧಾಕರ್, ನರೇಶ್, ಕೆ.ಪಿ.ಕುಮಾರ್, ಶ್ರೀಕಾಂತ್ ಹಾಗೂ ಪಾಮಾರ್ಥಿ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಸುಧಾಕರ್ ಆಲ್ಫಾ ಜೋಲಮ್ ತಯಾರಿಕೆ ಹಾಗೂ ಅದರ ಮಾರಾಟದ ಕೆಲಸವನ್ನು ಮಾಡುತ್ತಿದ್ದ. ಹೈದರಾಬಾದ್ ರಸ್ತೆಯಲ್ಲಿ ಆಲ್ಫಾ ಜೋಲಮ್ ಮಾರಾಟ ಮಾಡುತ್ತಿದ್ದಾಗ ಎನ್‌ಸಿಬಿ ಬಲೆಗೆ ಬಿದ್ದಿದ್ದಾನೆ. ಆರೋಪಿಗಳಿಂದ 3.25 ಕೆ.ಜಿ ಅಲ್ಫಾ ಜೋಲಮ್, 2 ಕಾರುಗಳು, 12.75 ಲಕ್ಷ ಹಣವನ್ನು ವಶಕ್ಕೆ. ಪಡೆದುಕೊಂಡಿದ್ದಾರೆ.
ಹೈದರಾಬಾದಿನ ಬಾಲಾನಗರದಲ್ಲಿ ಲ್ಯಾಬ್ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ, ಲ್ಯಾಬ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಪಾಮಾರ್ಥಿ ಎಂಬಾತನ ಬಂಧನ ಮಾಡಲಾಗಿದೆ. ಜೊತೆಗೆ ಡ್ರಗ್ಸ್ ಅಲ್ಫಾ ಜೋಲಮ್ ತಯಾರಿಕೆಗೆ ಬಳಸುತ್ತಿದ್ದ ಕಚ್ಚಾ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.