Saturday, June 10, 2023
Homeರಾಜಕೀಯಸಾಮಾಜಿಕ ಜಾಲತಾಣದಲ್ಲಿ ಶಾಸಕಿ ನಯನಾ ಫೋಟೋಸ್ ವೈರಲ್; ಕಿಡಿಗೇಡಿಗಳಿಗೆ ಖಡಕ್ ಉತ್ತರ ಕೊಟ್ಟ ಕೈ ಶಾಸಕಿ

ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ನಯನಾ ಫೋಟೋಸ್ ವೈರಲ್; ಕಿಡಿಗೇಡಿಗಳಿಗೆ ಖಡಕ್ ಉತ್ತರ ಕೊಟ್ಟ ಕೈ ಶಾಸಕಿ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕಿಯಾಗಿರುವ ನಯನಾ ಮೋಟಮ್ಮ ಅವರ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ವೈರಲ್ ಮಾಡಿದ ಕಿಡಿಗೇಡಿಗಳಿಗೆ ಮಾತಿನ ಮೂಲಕವೇ ಖಡಕ್ ಸಂದೇಶ ರವಾನಿಸಿದ್ದಾರೆ.

ಸ್ವತಃ ವಿಡಿಯೋವೊಂದನ್ನು ನಯನಾ ಮೋಟಮ್ಮ ಅವರು ಹಂಚಿಕೊಂಡಿದ್ದು, ಈ ವಿಡಿಯೋಗೆ ʼಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು… ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು.ʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ನಯನಾ ಅವರ ಈ ನೇರ ನಡೆ ಮತ್ತು ಧೈರ್ಯ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ನಯನ ಮೋಟಮ್ಮ ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ವಿರುದ್ಧ ಯಾರೇ ನೆಗೆಟಿವ್ ಅಥವಾ ಸುಳ್ಳು ಸುದ್ದಿ ಹಬ್ಬಿಸಿದಲ್ಲಿ ಸ್ವತಃ ತಾವೇ ಅವರಿಗೆ ಉತ್ತರಿಸುತ್ತಾರೆ.

ಸ್ವತಃ ತಾವೇ ತಮ್ಮ ಖಾಸಗಿ ಫೋಟೋಸ್‌ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವೈಯಕ್ತಿಯ ಜೀವನ ಮತ್ತು ರಾಜಕೀಯ ಜೀವನ ವಿಭಿನ್ನವಾಗಿರುತ್ತವೆ. ಈ ವಿಚಾರ ಅವಿವೇಕಿಗಳಿಗೆ ತಿಳಿದಿರಲಿ ಎಂದು ವಿರೋಧಿಗಳಿಗೆ ನೇರವಾಗಿ ಹೇಳಿದ್ದಾರೆ. ಸದ್ಯ ನಯನಾ ಅವರ ಧೈರ್ಯಕ್ಕೆ ಅವರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಯನ ಮೋಟಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದಲಿತವಾದಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ.

ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಯನಾ ಅವರು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ವಿರೋಧದ ನಡುವೆಯೂ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬಂದಿದ್ದಾರೆ. ಬಿಜೆಪಿಯ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿತ್ತು. ಆದ್ರೆ ನಯನಾ ಮೊಟಮ್ಮ ಗೆಲುವು ಸಾಧಿಸಿ ಶಾಸಕಿಯಾಗಿದ್ದಾರೆ.

ಬಿಜೆಪಿಯ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿತ್ತು. ಆದ್ರೆ ನಯನಾ ಮೊಟಮ್ಮ ಗೆಲುವು ಸಾಧಿಸಿ ಶಾಸಕಿಯಾಗಿದ್ದಾರೆ.

ಶೃಂಗೇರಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆ ಹೋಮವೇ ಕಾರಣನಾ?

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶಕ್ತಿ ಪೀಠದಲ್ಲಿ ನಡೆದ ಆ ಹೋಮದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣ ಎನ್ನಲಾಗುತ್ತಿದೆ. 2023 ರ ಚುನಾವಣೆಯ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಗೆ ಆಗಮಿಸಿ ಶಾರದೆಯ ದರ್ಶನ ಪಡೆದಿದ್ದರು, ಅಲ್ಲದೆ ಎರಡು ದಿನಗಳ ಕಾಲ ಶೃಂಗೇರಿಯಲ್ಲೇ ವ್ಯಾಸ್ತವ್ಯ ಹೂಡಿ ಹೋಮ ಹವನವನ್ನು ನಡೆಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಶಾರದೆಯ ನೆಲೆವೀಡು ಶೃಂಗೇರಿಯಿಂದಲೇ ಚುನಾವಣಾ ಪ್ರಚಾರವನ್ನು ಕೂಡ ಆರಂಭಿಸಿದರು.

ಹೌದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಗೆ ಆಗಮಿಸಿ ಶಾರದೆಯ ದರ್ಶನ ಪಡೆದು ಶೃಂಗೇರಿಯಿಂದ ಪಕ್ಷದ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪರವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಶಾರದೆಯ ನೆಲೆವೀಡು ಶೃಂಗೇರಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು.

ಪ್ರಿಯಾಂಕಾಗಾಂಧಿಯಿಂದಲೂ ಪಕ್ಷದ ಪರವಾಗಿ ಪ್ರಚಾರ:
ಇಂದಿರಾಗಾಂಧಿಯ ಮೊಮ್ಮಗಳು ಪ್ರಿಯಾಂಕಾಗಾಂಧಿಯೂ ಜಿಲ್ಲೆಗೆ ಆಗಮಿಸಿ ಶೃಂಗೇರಿ ಶಾರದೆಯ ದರ್ಶನ ಪಡೆದು ಮಠದ ಆನೆಗಳಿಂದಲೂ ಆಶೀರ್ವಾದ ಪಡೆದುಕೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸಿದರು.

Most Popular

Recent Comments