ಮಂಗಳೂರು: ರಾಜ್ಯೋತ್ಸವ ಸಂಭ್ರಮದಲ್ಲಿ ಮಂಗಳೂರಿನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗೆ ಮಾಡಿ ಹಾರಿಸಿ ರಾಷ್ಟ್ರಗೀತೆಯನ್ನು ಹಾಡಿದ ಘಟನೆ ನಡೆದಿದೆ.
ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ. ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕ ಬಾವುಟದ ಜೊತೆ ರಾಷ್ಟ್ರಧ್ವಜವನ್ನು ಸಹ ಹಾರಿಸಲು ನಿರ್ಧಾರ ಮಾಡಲಾಗಿತ್ತು ಸಚಿವ ಅಂಗಾರ ರಾಷ್ಟ್ರದ್ವಜವನ್ನು ಹಾರಿಸುವ ಸಂದರ್ಭದಲ್ಲಿ ತಲೆಕೆಳಗಾಗಿ ಹಾರಿಸಿದ್ದು ಮಾತ್ರವಲ್ಲದೇ ರಾಷ್ಟ್ರಗೀತೆಯನ್ನು ಸಹ ಹಾಡಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಿದ್ದ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ. ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್, ಜನಪ್ರತಿನಿಧಿ, ಉನ್ನತ ಅಧಿಕಾರಿಗಳು ಧ್ವಜಕ್ಕೆ ವಂದನೆಯನ್ನು ಸಲ್ಲಿಸಿದ್ದರು. ಆದರೆ ಯಾರ ಗಮನಕ್ಕೂ ಧ್ವಜ ತಲೆಕೆಳಗಾಗಿ ಹರಿದ್ದು ಗಮನಕ್ಕೆ ಬಂದಿರಲಿಲ್ಲ. ನಂತರ ಅಲ್ಲಿದ್ದ ವ್ಯಕ್ತಿ ಅಧಿಕಾರಿಗಳ ಗಮನಕ್ಕೆ ತಂದು ದ್ವಜವನ್ನು ಕೆಳಗಿಳಿಸಿ ಸರಿಪಡಿಸಿದ್ದಾರೆ.