Saturday, June 10, 2023
Homeಸುದ್ದಿಗಳುದೇಶಭಾಷಣ ಮಾಡಲು ಜನರಿಂದ ಸಲಹೆ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಭಾಷಣ ಮಾಡಲು ಜನರಿಂದ ಸಲಹೆ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮುಂಬರುವ ಆಗಸ್ಚ್ 15 ರಂದು ನಡೆಯಲಿರುವ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಾವು ಮಾಡುವ ಭಾಷಣಕ್ಕಾಗಿ ಪ್ರಧಾನಿ ಮೋದಿಯವರು ಸಾರ್ವಜನಿಕರಿಂದ ಸಲಹೆಯನ್ನು ಆಹ್ವಾನಿಸಿದ್ದಾರೆ.

ಇದರ ಬಗ್ಗೆ ಇಂದು ಟ್ವೀಟ್ ಮಾಡಿರುವಂತಹ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 ರ ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ಭಾಷಣಕ್ಕಾಗಿ ದೇಶದ ಜನರ ಬಳಿ ಅವರ ಆಲೋಚನೆಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಳ್ಳುವಂತೆ ಮನವಿಯನ್ನು ಮಾಡಿದ್ದಾರೆ. ಅಲ್ಲದೆ ನೀವು ನೀಡುವಂತಹ ಸಲಹೆಗಳು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿರುವಂತಹ ಗೋಡೆಗಳ ಮೇಲಿಂದ ಇಡೀ ದೇಶಕ್ಕೇ ಪ್ರತಿಧ್ವನಿಸುತ್ತವೆ ಎಂದು ಹೇಳಿದರು.

ಪ್ರಧಾನ ಮಂತ್ರಿಯವರು ಸ್ವಾತಂತ್ರ‍್ಯ ದಿನದಂದು ನಡೆಯುವಂತಹ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ದೇಶಕ್ಕೆ ತಿಳಿಸಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿಯವರು ನಾಗರಿಕರಿಂದ ನೇರವಾಗಿ ವಿಚಾರಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯೂ ಕೂಡ ಅವರು ಸಾರ್ವಜನಿಕರಿಂದ ಸಲಹೆಯನ್ನು ಕೇಳಿದ್ದಾರೆ.

ನವ ಭಾರತಕ್ಕಾಗಿ ತಮ್ಮ ವಿಚಾರಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಲು ನಾಗರಿಕರನ್ನು ಆಹ್ವಾನಿಸಿದ್ದಾರೆ. ಆದ್ದರಿಂದ, ಈಗ ನಿಮ್ಮ ಆಲೋಚನೆಗಳನ್ನು ಹೇಳಲು, ನಿಮ್ಮ ಸಲಹೆಗಳಿಗೆ ಪದಗಳನ್ನು ನೀಡಲು ಮತ್ತು ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಅವಕಾಶವಿದೆ ಎಂದು ಪ್ರಧಾನಿ ಸಚಿವಾಲಯವು ತಿಳಿಸಿದೆ.

Most Popular

Recent Comments