ಕೊಪ್ಪಳ: ಬಿಟ್ ಕಾಯಿನ್ ಹಗರಣದ ಬಗ್ಗೆ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವಾಗಲೇ ಮಾತನಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳಿ ಮೋಸ ಮಾಡುವುದು ರಕ್ತದಿಂದಲೇ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್ ಕಾಂಗ್ರೆಸ್ ಪಕ್ಷ ಸುಳ್ಳು ಮತ್ತು ಮೋಸದಿಂದ ಕೂಡಿದೆ. ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೇ ಬೆಳಕಿಗೆ ಬಂದಿತ್ತು ಈ ಹಿಂದೆ ಸದನದಲ್ಲಿ ಈ ವಿಚಾರ ಪ್ರಸ್ತಾಪನೆ ಆಗಿತ್ತು. ಆದರೆ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಬಾಯಿ ಬಿಡಲಿಲ್ಲ ತನಿಖೆಯನ್ನು ಸಹ ನಡೆಸಿಲ್ಲ.
ಈ ಹಿಂದೆ ನಡೆದ ನಲಪಾಡ್ ಹಲ್ಲೆಯಲ್ಲಿ ನಡೆದ ಪ್ರಕರಣವನ್ನು ಸಿಎಂ ಗೆ ಪ್ರಶ್ನೆ ಮಾಡಿ ಬಿಟ್ ಕಾಯಿನ್ ಬಗ್ಗೆಯು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದರು. ಆ ವಿಷಯಕ್ಕೂ ಸಿದ್ದರಾಮಯ್ಯ ಬಿಟ್ ಕಾಯಿನ್ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈಗ ಬಿಟ್ ಕಾಯಿನ್ ಬಗ್ಗೆ ಸಿದ್ದರಾಮಯ್ಯ ನವರು ಉತ್ಸಾಹವನ್ನು ತೋರಿಸಿ ಪದೇ ಪದೇ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಮತ ಬ್ಯಾಂಕ್ ನನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರನ್ನು ಉದ್ಧಾರ ಮಾಡುವುದಿಲ್ಲ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಈ ಕುತಂತ್ರಿ ಕೆಲಸವನ್ನು ಮಾಡುತ್ತಿದೆ. ಬಿಟ್ ಕಾಯಿನ್ ಹಗರಣದ ಬಗ್ಗೆ ಇಡಿ ಮತ್ತು ಸಿಬಿಐ ಇಂಟರ್ ಪೊಲ್ ಮುಖಾಂತರ ತನಿಖೆಯನ್ನು ನಡೆಸುತ್ತಿದ್ದು ತನಿಖೆಯ ನಂತರ ಸತ್ಯ ಹೊರಗೆ ಬರುತ್ತದೆ.