ಬಿಹಾರ: ನಕ್ಸಲರು ಒಂದೇ ಕುಟುಂಬದ ನಾಲ್ವರನ್ನು ಸಾಯಿಸಿ ಅವರನ್ನು ಮನೆಯ ಕೊಟ್ಟಿಗೆಯಲ್ಲಿ ನೇಣು ಹಾಕಿದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಗಯಾ ಜಿಲ್ಲೆಯ ದುಮಾರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಗ್ರಾಮದ ವಾಸಿ ಸರಯು ಸಿಂಗ್ ಭೋಕ್ತಾ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದಾರೆ.
ಭೋಕ್ತಾ ರವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ ನಕ್ಸಲರು ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಪತ್ನಿಯರನ್ನು ಹತ್ಯೆ ಮಾಡಿ ಅವರ ಮೃತದೇಹವನ್ನು ಅವರ ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಸಿ ಮನೆಯ ಮೇಲೆ ಸ್ಫೋಟಕಗಳನ್ನು ಬಳಸಿ ಅವರ ಮನೆಯನ್ನು ಸ್ಫೋಟಗೊಳಿಸಿ ಕೃತ್ಯ ನಡೆಸಿದ್ದಾರೆ.
ಭೋಕ್ತಾ ಕುಟುಂಬದವರು ಪೋಲಿಸ್ ಮಾಹಿತಿದಾರರು ಎಂದು ಆರೋಪಿಸಿ ಒಂದು ಕರಪತ್ರವನ್ನು ಅವರ ಮನೆಯ ಮೇಲೆ ಅಂಟಿಸಿ ಅವರನ್ನು ಹತ್ಯೆ ಮಾಡಿದ್ದಾರೆ.
2021 ಮಾರ್ಚ್ ನಲ್ಲಿ ಭೋಕ್ತಾ ರವರ ಕುಟುಂಬ ನಕ್ಸಲರ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳಿದ ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಕೋಬ್ರಾ ಬೇಟಾಲಿಯನ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡಿದ ನಂತರ ಅವರ ಬಳಿಯಿದ್ದ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ನಕ್ಸಲರು ಇರುವ ಮಾಹಿತಿಯನ್ನು ಭೋಕ್ತಾ ಕುಟುಂಬದವರೇ ಪೊಲೀಸರಿಗೆ ನೀಡಿದ್ದರಿಂದ ನಕ್ಸಲರು ಅವರ ಮನೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ.
ಕೃತ್ಯ ನಡೆಸಿದ ಆರೋಪಿಗಳ ಪತ್ತೆಗಾಗಿ ಗಯಾ ಎಸ್‌ಎಸ್‌ಪಿ ಆದಿತ್ಯ ಕುಮಾರ್ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.