ವಿಜಯಪುರ: ದೇಶದ ರಾಜಕೀಯ ನಾಯಕರು ನಿಜವಾದ ಗೂಂಡಾಗಳು, ಚುನಾವಣೆಯ ಸಮಯದಲ್ಲಿ ಮಾತ್ರ ಬಂದು ಹಿಂದುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಭ್ರಷ್ಟ ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಬಂದು ಹಿಂದುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಹಿಂದುಗಳಿಗಾಗಿ ಹಿಂದೂಗಳ ಉದ್ದಾರಕ್ಕಾಗಿ ಹೋರಾಡುವ ಹಿಂದೂಗಳ ಮೇಲೆ ರೌಡಿ ಶೀಟರ್ ಕೇಸ್ ನನ್ನು ಹಾಕುತ್ತಾರೆ. ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಗಳ ಹಿಂದೆ ಒಬ್ಬ ರಾಜಕಾರಣಿ ಇದ್ದೇ ಇರುತ್ತಾನೆ, ಭ್ರಷ್ಟ ಅಧಿಕಾರಿಗಳನ್ನು ಸಾಲಾಗಿ ನಿಂತು ಗುಂಡು ಹಾರಿಸುವುದು ಇಲ್ಲವೇ ಅವರನ್ನು ಗಲ್ಲಿಗೇರಿಸಬೇಕು ಎಂದು ಕಿಡಿಕಾರಿದರು.