ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬರು ಹಿಂದೂ ದೇವಸ್ಥಾನಕ್ಕೆ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿ ತನ್ನ ಬಹುದಿನದ ಕನಸನ್ನು ನನಸಾಗಿಸಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಜಸ್ನಾ ಎಂಬ ಮುಸ್ಲಿಂ ಯುವತಿ ಪಂಡಲಂ ನ ಉಲನಾಡು ಶ್ರೀಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ಶ್ರೀಕೃಷ್ಣನ ವರ್ಣಚಿತ್ರವನ್ನು ತಾವೇ ರಚಿಸಿ ಅದನ್ನು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಜಸ್ನಾ ರವರು ಅನೇಕ ಹಿಂದೂ ದೇವರ ವರ್ಣರಂಜಿತ ಚಿತ್ರವನ್ನು ರಚಿಸಿದ್ದಾರೆ ಕಳೆದ 6 ವರ್ಷದಲ್ಲಿ ಸುಮಾರು 500 ಕ್ಕೂ ಹೆಚ್ಚು ದೇವರ ಚಿತ್ರವನ್ನು ರಚಿಸಿದ್ದಾರೆ.
ಹಾಗೆಯೇ ತಾನು ರಚಿಸಿದ ಕೃಷ್ಣನ ಚಿತ್ರವನ್ನು ದೇವಾಲಯಕ್ಕೆ ನೀಡುವುದು ಅವರ ಬಯಕೆಯಾಗಿತ್ತು ಆದರೆ ಕಾರಣಾಂತರಗಳಿಂದ ಅವರ ಕನಸು ಈಡೇರಿರಲಿಲ್ಲ ಅವರು ಭಾನುವಾರ ದೇವಾಲಯಕ್ಕೆ ವರ್ಣಚಿತ್ರ ನೀಡುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಇದರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ ಜಸ್ನಾ ಶ್ರೀಕೃಷ್ಣನ ಮೂರ್ತಿಯನ್ನು ಕಣ್ತುಂಬಿಕೊಂಡು ಆ ದೇವರ ಮುಂದೆಯೇ ನಾನು ಬಿಡಿಸಿದ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡುವುದು ನನ್ನ ದೊಡ್ಡ ಕನಸಾಗಿತ್ತು ಅದು ಈಗ ನೆರವೇರಿದೆ, ನನ್ನ ಕನಸನ್ನು ನೆರವೇರಿಸಲು ಸಹಕರಿಸಿದ ದೇವಸ್ಥಾನದ ಅಧಿಕಾರಿಗಳಿಗೆ ಕೃತಜ್ಞತೆಗಳು ಎಂದು ಜಸ್ನಾ ಹೇಳಿದ್ದಾರೆ.