ಶಿರಸಿ: ಅನ್ಯಕೋಮಿನ ಯುವಕನೊಬ್ಬ ಹಿಂದೂ ಬ್ರಾಹ್ಮಣ ಯುವತಿಯನ್ನು ಪ್ರೀತಿಸಲು ಕೈ ಹಿಡಿದು ಎಳೆದ ಆರೋಪದಡಿ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾಳೆ.
ಜಾಫರ್ ಶೇಕ್ ಅಜಾಮಾಸ್ (20) ಮುಸ್ಲಿಂ ಯುವಕ ನಗರದ ಎಂ. ಎಂ ಆರ್ಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿದ್ದು. ಬ್ರಾಹ್ಮಣ ಯುವತಿ ನಗರದ ಎಂ. ಇ. ಎಸ್ ಕಾಮರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಆ ಯುವಕ ಯುವತಿಯೊಂದಿಗೆ ಕೆಲ ಹಿಂದಿನ ದಿನದಿಂದಲೇ ಸ್ನೇಹವನ್ನು ಬೆಳೆಸಿಕೊಂಡಿದ್ದ ಇಬ್ಬರು ಸ್ನೇಹಿತರಾಗಿದ್ದು ಹಲವೆಡೆ ಕಾಣಸಿಗುತ್ತಿದ್ದರು. ಆದರೆ ಯುವತಿ ಆತ ನನಗೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಬೇಕಾದರೆ ಮೊದಲೇ ಪರಿಚಯವಿದ್ದ. ಆದರೆ ನಾನು ಕಾಲೇಜಿಗೆ ತೆರಳಿ ಮಾರ್ಕ್ಸ್ ಕಾರ್ಡ್ ನನ್ನು ತೆಗೆದುಕೊಂಡು ಬಸ್ಸಿಗೆ ಕಾಯುತ್ತಿದ್ದ ಸಂದರ್ಭದಲ್ಲಿ ಆ ಯುವಕ ನನ್ನ ಬಳಿ ಬಂದು ಪ್ರೇಮ ನಿವೇದನೆ ಮಾಡಿ ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದು ಪೀಡಿಸಿದ್ದಾನೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಯುವಕನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಿಷಯ ತಿಳಿದು ಆ ಯುವಕನನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ ಅಲ್ಲದೇ ಅಂದಿನಿಂದ ಆ ಯುವಕ ಪರಾರಿಯಾಗಿದ್ದಾನೆ.
ಯುವಕ ಮತ್ತು ಯುವತಿಯ ಸ್ನೇಹಿತರನ್ನು ವಿಚಾರಿಸಿದಾಗ ಕೆಲವು ವರ್ಷಗಳ ಹಿಂದೆಯೇ ಇವರ ನಡುವೆ ಗೆಳೆತನ ಶುರುವಾಗಿದ್ದು. ಅವರಿಬ್ಬರೂ ಅಂದಿನಿಂದಲೂ ಪ್ರೀತಿ ಸಲುಗೆಯಿಂದ ಇರುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಈ ಘಟನೆ ನಡೆದು ಒಂದು ತಿಂಗಳಾದ ನಂತರ ಯುವತಿ ದೂರನ್ನು ನೀಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿಖರವಾದ ಮಾಹಿತಿಯೆಡೆ ಗಮನ ಹರಿಸಿದ್ದಾರೆ. ಈ ಯುವಕ ಯುವತಿಯ ಫೋಟೋ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು. ಇವರಿಬ್ಬರು ಪರಿಚಯಸ್ತರಾಗಿದ್ದು ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ.
ಅವರ ನಡುವೆ ಗೆಳೆತನ ಇತ್ತೋ, ಪ್ರೀತಿ ಇತ್ತೋ ಎಂದು ಪೊಲೀಸ್ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.